ಮಾಜಿ ಹಿರಿಯ ಶಾಸಕ ವಸಂತ ಬಂಗೇರರಿಗೆ ವೇಣೂರಿನಲ್ಲಿ ನುಡಿನಮನ
ವೇಣೂರು: ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ವೇಣೂರು , ಯುವವಾಹಿನಿ (ರಿ.) ವೇಣೂರು ಘಟಕ ಹಾಗೂ ಬಂಗೇರ ಅಭಿಮಾನಿ ಬಳಗ ವೇಣೂರು ಇದರ ವತಿಯಿಂದ ಬೆಳ್ತಂಗಡಿಯ ಜನಪ್ರಿಯ ಮಾಜಿ ಹಿರಿಯ ಶಾಸಕ ಕೆ. ವಸಂತ ಬಂಗೇರರಿಗೆ ನುಡಿ ನಮನ ಕಾರ್ಯಕ್ರಮ ವೇಣೂರು ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಎ. ಜಯರಾಮ ಶೆಟ್ಟಿ ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಗುಣಪ್ರಸಾದ್ ಕಾರಂದೂರು ಮಾತನಾಡಿ, ಬಂಗೇರರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಬಂಗೇರರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ ಎಂದರು.
ವೇಣೂರು ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘ ಇದರ ಅಧ್ಯಕ್ಷರಾದ ಹರೀಶ್ ಕುಮಾರ್ ಮಾತನಾಡಿ, ಬಂಗೇರರು ತನ್ನ ಜೀವನದ ಉದ್ದಕ್ಕೂ ಬಡವರ ಏಳಿಗೆಯನ್ನು ಬಯಸಿದವರು ಎಂದರು. ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಶುಭಕರ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ ಹೆಗ್ಡೆ ಹಟ್ಟಾಜೆ ಗುತ್ತು, ಹಿರಿಯರಾದ ಮಹಮ್ಮದ್ ಸಾಹೇಬ್, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷರಾದ ಪ್ರಸಾದ್ ಎಂ ಕೆ , ಆರಾಧನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಭಟ್, ಗ್ರಾಮ ಪಂ ಸದಸ್ಯರಾದ ಅನೂಪ್ ಜೆ ಪಾಯಸ್ , ಹರೀಶ್ ಪಿ ಎಸ್ , ಸುನೀಲ್ ಬಜಿರೆ, ಸುರೇಶ್ ಅಂಡಿಂಜೆ, ಪ್ರಮುಖರಾದ ವಿಶ್ವನಾಥ ದಡ್ಡಲ್ ಪಲ್ಕೆ, ವಿಕ್ಟರ್ ಮಿನಿಜಸ್, ರಮೇಶ್ ಪಡ್ಡಾಯಿಮಜಲು, ದಯಾನಂದ ದೇವಾಡಿಗ, ಸತೀಶ್ ಉಜಿರ್ದಡ್ಡ, ಸತೀಶ್ ಕಜಿಪಟ್ಟ, ನವೀನ್ ಪೂಜಾರಿ ಪಚೇರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು. ಬೆಳ್ತಂಗಡಿ ಶ್ರೀ.ಗು.ನಾ.ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ನಿತೀಶ್ ಹೆಚ್ ಕೋಟ್ಯಾನ್ ಸ್ವಾಗತಿಸಿ, ವೇಣೂರು ಶ್ರೀ.ಗು.ನಾ.ಸ್ವಾ. ಸೇ.ಸಂಘದ ಕಾರ್ಯದರ್ಶಿ ರಾಕೇಶ್ ಕುಮಾರ್ ನಿರೂಪಿಸಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಸಂಘಟನಾ ಕಾರ್ಯದರ್ಶಿ ಅರುಣ್ ಕೋಟ್ಯಾನ್ ವಂದಿಸಿದರು.