December 24, 2024

ಮಂಗಳೂರಿನ ಕಂಕನಾಡಿಯ ನಡು ರಸ್ತೆಯಲ್ಲಿ ನಮಾಜ್​: ಕೇಸ್​ ಬುಕ್

0

ದಕ್ಷಿಣ ಕನ್ನಡ, ಮೇ.28: ಇದೇ ಮೇ.24 ರಂದು ಮಂಗಳೂರಿನ(Mangaluru) ಕಂಕನಾಡಿಯಲ್ಲಿನ ಮಸೀದಿ ಮುಂದೆ ಇರುವ ರಸ್ತೆಯಲ್ಲಿಯೇ ಯುವಕರ ತಂಡವೊಂದು ನಮಾಜ್ ಮಾಡಿದ್ದು, ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇಸ್​ ದಾಖಲಾಗಿದೆ. ಹೌದು, ಕದ್ರಿ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 341, 283, 143, 149ರ ಅಡಿ ಸ್ವಯಂಪ್ರೇರಿತ ಸುಮೊಟೊ ಪ್ರಕರಣವನ್ನು​ ದಾಖಲಿಸಿದ್ದಾರೆ.

 

ಏನಿದು ಘಟನೆ?
ಕಳೆದ ಶುಕ್ರವಾರ ಮಂಗಳೂರಿನ ಕಂಕನಾಡಿಯಲ್ಲಿ ಹಗಲು ವೇಳೆಯಲ್ಲಿಯೇ ನಡು ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡಿದ್ದರು. ನಮಾಜ್​ ಮಾಡಿದ ವಿಡಿಯೋ ಎಲ್ಲಡೆ ಹರಿದಾಡಿತ್ತು. ಇದಕ್ಕೆ ಎಲ್ಲೆಡೆ ಅಸಮಧಾನ ವ್ಯಕ್ತವಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಗಿದ್ದು, ವಾಹನ ಸವಾರರು ಯೂಟರ್ನ್ ತೆಗೆದುಕೊಂಡು ಹೋಗಿದ್ದರು. ಈ ಹಿನ್ನಲೆ ಅಪರಿಚಿತ ವ್ಯಕ್ತಿಗಳ ಮೇಲೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು