December 24, 2024

ಜಯಲಲಿತಾ ಹಿಂದುತ್ವ ನಾಯಕಿ ಎಂದ ಅಣ್ಣಾಮಲೈ-ಮುಂದೇನಾಯ್ತು ಗೊತ್ತಾ?

0

 

ಚೆನ್ನೈ, ಮೇ, 26: ಮಾಜಿ ಐಪಿಎಸ್‌, ಭಾರತೀಯ ಜನತಾ ಪಕ್ಷದ ತಮಿಳುನಾಡು ರಾಜ್ಯ ಘಟಕದ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಅವರು ಇದೀಗ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಬಗ್ಗೆ ಧರ್ಮದ ವಿಚಾರವನ್ನಿಟ್ಟುಕೊಂಡು ಒಂದು ಹೇಳಿಕೆಯನ್ನು ನೀಡಿದ್ದು, ಇದೀಗ ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದರೆ ಅವರು ಹೇಳಿದ್ದಾದ್ರು ಏನು ಹಾಗೂ ಮುಂದೇನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

 

ತಮಿಳುನಾಡು 2021 ವಿಧಾನಸಭಾ ಚುನಾವಣೆಯಲ್ಲಿ ಅರವಕುರಿಚಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ತಮಿಳುನಾಡು ಭಾರತೀಯ ಜನತಾ ಪಕ್ಷದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಲ್.ಮುರುಗನ್ ಕೇಂದ್ರ ಸಚಿವರಾದ ನಂತರ, ತೆರವಾದ ಸ್ಥಾನಕ್ಕೆ ಕೆ.ಅಣ್ಣಮಲೈ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಯ್ತು.

 

ಇದೀಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಹಿಂದುತ್ವದ ನಾಯಕಿ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಮಲೈ ಹೇಳಿದ್ದು, ಇದರ ವಿರುದ್ಧ ಎಐಎಡಿಎಂಕೆ ನಾಯಕರು ಅಸಮಾಧನ ಹೊರಹಾಕಿದ್ದಾರೆ.

 

ಈ ಕುರಿತು ಮಾಜಿ ಸಚಿವರಾದ ಡಿ.ಜಯಕುಮಾರ್‌ ಮತ್ತು ಆರ್‌.ಬಿ.ಉದಯ್‌ಕುಮಾರ್‌ ಪ್ರತಿಕ್ರಿಯಿಸಿ, “ಒಂದೇ ಧರ್ಮದಲ್ಲಿ ನಂಬಿಕೆ ಹೊಂದಿರುವ ಅಣ್ಣಾಮಲೈ, ಮೃತಪಟ್ಟ ನಾಯಕರ ಬಗ್ಗೆ ತಪ್ಪು ಗ್ರಹಿಕೆ ಬರುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಇನ್ನು “ಜಯಲಲಿತಾ ದೇವರಲ್ಲಿ ನಂಬಿಕೆಯುಳ್ಳವರಾಗಿದ್ದರು. ಆದರೆ, ಧರ್ಮದಲ್ಲಿ ನಂಬಿಕೆ ಹೊಂದಿರಲಿಲ್ಲ. ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುತ್ತಿದ್ದರು. ಅಂತಹ ನಾಯಕರನ್ನು ಯೋರೊಬ್ಬರೂ ಸಂಕುಚಿತರಾಗಿಸಲು ಸಾಧ್ಯವಿಲ್ಲ,” ಎಂದು ವಿ.ಕೆ.ಶಶಿಕಲಾ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 

2019ರಲ್ಲಿ ಅಣ್ಣಮಲೈ ಅವರು ತಮ್ಮ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದು, ನಂತರ ಅವರು ತಮ್ಮ ತವರು ರಾಜ್ಯ ತಮಿಳುನಾಡಿಗೆ ಮರಳಿದರು. ಅವರು ನೈಸರ್ಗಿಕ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಸಂಬಂಧಿತ ಕೆಲಸದಲ್ಲಿ ತೊಡಗಿದ್ದರು. ಬಳಿಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತದಿಂದ ಸ್ಫೂರ್ತಿ ಪಡೆದು ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷದ ಸದಸ್ಯರಾದರು.

ಆಗಿನಿಂದ ಅವರು ಒಂದೇ ಸಿದ್ಧಂತವನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಅವರು ಮೃತಪಟ್ಟ ನಾಯಕರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳ್ನು ಕೊಡುವುದು ಸರಿಯಲ್ಲ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು