December 23, 2024

IPL 2024: ಇಂದು ನಿರ್ಣಾಯಕ ಪಂದ್ಯದಲ್ಲಿ RCB vs RR ಮುಖಾಮುಖಿ

0

IPL 2024 Eliminator: ಐಪಿಎಲ್​ನ ನಾಕೌಟ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದೆ. ಇಂದು ನಡೆಯಲಿರುವ ಈ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಅಂದರೆ ಇಂದಿನ ಪಂದ್ಯವು ಉಭಯ ತಂಡಗಳ ಪಾಲಿಗೂ ನಿರ್ಣಾಯಕ. ಹೀಗಾಗಿ ಈ ಮ್ಯಾಚ್​ನಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.

 

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್​ಗೆ ಪ್ರವೇಶಿಸಿದರೆ, ಸೋಲುವ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯ.

ಪಂದ್ಯದ ಕುರಿತಾದ ಸಂಕ್ಷಿಪ್ತ ಮಾಹಿತಿ:
ಎಲಿಮಿನೇಟರ್ ಪಂದ್ಯ: RR vs RCB

ನಾಯಕರುಗಳು: ರಾಜಸ್ಥಾನ್ ರಾಯಲ್ಸ್ (RR) ಮತ್ತು ಫಾಫ್ ಡುಪ್ಲೆಸಿಸ್ (RCB)

ಟಾಸ್ ಪ್ರಕ್ರಿಯೆ: ರಾತ್ರಿ 7 ಗಂಟೆಗೆ.

ಪಂದ್ಯ ಶುರು: ರಾತ್ರಿ 7.30 ರಿಂದ

ಪಂದ್ಯ ನಡೆಯುವ ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

ಅಲಭ್ಯ ಸ್ಟಾರ್ ಆಟಗಾರರು: ವಿಲ್ ಜಾಕ್ಸ್​ (RCB), ಜೋಸ್ ಬಟ್ಲರ್ (RR).

 

ರಾಜಸ್ಥಾನ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ ಜುರೆಲ್, ರೋವ್​ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ನಾಂಡ್ರೆ ಬರ್ಗರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಸೇನ್, ಶುಭಂ ದುಬೆ, ಕೇಶವ್ ಮಹಾರಾಜ್, ಡೊನೊವನ್ ಫೆರೇರಾ, ನವದೀಪ್ ಸೈನಿ, ಶಿಮ್ರಾನ್ ಹೆಟ್ಮೆಯರ್, ತನುಷ್ ಕೋಟ್ಯಾನ್, ಅಬಿದ್ ಮುಷ್ತಾಕ್, ಕುನಾಲ್ ಸಿಂಗ್ ರಾಥೋಡ್.

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಯಶ್ ದಯಾಲ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ಸ್ವಪ್ನಿಲ್ ಸಿಂಗ್, ಅನುಜ್ ರಾವತ್ , ಸುಯಶ್ ಪ್ರಭುದೇಸಾಯಿ, ವಿಜಯ್‌ಕುಮಾರ್ ವೈಶಾಕ್, ಹಿಮಾಂಶು ಶರ್ಮಾ, ಮಯಾಂಕ್ ಡಾಗರ್, ಅಲ್ಜಾರಿ ಜೋಸೆಫ್, ಮನೋಜ್ ಭಾಂಡಗೆ, ಆಕಾಶ್ ದೀಪ್, ಸೌರವ್ ಚೌಹಾಣ್, ರಾಜನ್ ಕುಮಾರ್, ಟಾಮ್ ಕರನ್.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು