ಲೈಂಗಿಕ ದೌರ್ಜನ್ಯ ಪ್ರಕರಣ: ಜರ್ಮಿನಿಯಿಂದ ಲಂಡನ್‌ಗೆ ಪರಾರಿಯಾದ ಪ್ರಜ್ವಲ್ ರೇವಣ್ಣ
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಇದೀಗ, ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಲಂಡನ್‌ಗೆ ರೈಲಿನ ಮೂಲಕ ಪ್ರಯಾಣ ಬೆಳಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಇಂಗ್ಲೆಂಡ್ನಲ್ಲಿನ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ಇಬ್ಬರು ಗೆಳೆಯರು ರೈಲು ಮೂಲಕ ಜರ್ಮಿನಿಯ ಮ್ಯೂನಿಚ್ ಲಂಡನ್‌ಗೆ ಹೋಗಿರುವ ಬಗ್ಗೆ ಟಿವಿ9 ವರದಿ ಮಾಡಿದೆ. ದುಬೈ ಮೂಲದ ಒರ್ವ ಮತ್ತು ಬೆಂಗಳೂರು ಮೂಲದ ಒರ್ವ ಸ್ನೇಹಿತ ಪ್ರಜ್ವಲ್ ರೇವಣ್ಣ ಅವರ ಜೊತೆ ಇದ್ದಾರೆ. ಮೂರು ಮಂದಿ ಒಟ್ಟಿಗೆ ಲಂಡನ್‌ಗೆ ಹೋಗಿರುವ ಸಾಧ್ಯೆತೆ ಇದೆ. ಇನ್ನು ಪ್ರಜ್ವಲ್ ರೇವಣ್ಣ ಕೆಳದ 15 ದಿನಗಳಿಂದ ಕುಟುಂಬದ ಸಂಪರ್ಕದಲ್ಲಿಲ್ಲ.
2 ಬಾರಿ ವಿಮಾನ ಟಿಕೆಟ್ ಕ್ಯಾನ್ಸಲ್
ಪ್ರಜ್ವಲ್ ರೇವಣ್ಣ ಈಗಾಗಲೇ 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.