ಚಿನ್ನದ ಬೆಲೆಯಲ್ಲಿ 1,000 ರೂಪಾಯಿ ಕುಸಿತ!
ಚಿನ್ನದ ಬೆಲೆ ಇಳಿಕೆ ಕಂಡ ನಂತರ ಖರೀದಿ ಮಾಡೋಣ ಅಂತಾ ಕಾಯುತ್ತಿದ್ದ ಮಹಿಳೆಯರು ಸೇರಿದಂತೆ, ಚಿನ್ನ ಪ್ರಿಯರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಒಂದೇ ಸಮನೆ ಏರಿಕೆ ಆಗುತ್ತಿದೆ ಅಂತಾ ಮಹಿಳೆಯರು & ಚಿನ್ನ ಖರೀದಿ ಮಾಡಬೇಕಿದ್ದವರು ಬೇಸರವನ್ನು ಹೊರಹಾಕುತ್ತಿದ್ದರು. ಆದರೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ 1,000 ರೂಪಾಯಿ ಕಡಿಮೆ ಆಗಿದೆ.
ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಆಗುತ್ತಾ?
ಹೌದು, ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆ ಭಾರಿ ಇಳಿಕೆ ಕಾಣುತ್ತಿದೆ. ಭಾರತದಲ್ಲಿ ಇದೀಗ, 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,550 ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,600 ರೂಪಾಯಿಗೆ ಕುಸಿತ ಕಂಡಿದೆ. ಈ ಮೂಲಕ ಚಿನ್ನದ ಬೆಲೆ ಅದರ ಅತಿಹೆಚ್ಚು ಬೆಲೆಗೆ ಹೋಲಿಕೆ ಮಾಡಿದರೆ ಬರೋಬ್ಬರಿ 1000 ರೂಪಾಯಿಯಷ್ಟು ಕಡಿಮೆ ಆಗಿದೆ. ಇದು ಚಿನ್ನ ಖರೀದಿ ಮಾಡುವವರಿಗೆ ಖುಷಿ ನೀಡಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ 8,350 ರೂಪಾಯಿ ಇದ್ದರೆ. ವಿವಿಧ ದೇಶದಲ್ಲೂ ಬೆಳ್ಳಿಯ ಬೆಲೆ ಕುಸಿತ ಕಾಣುತ್ತಿದೆ. ಹೀಗಾಗಿ ಜನರಿಗೆ ಈ ಸುದ್ದಿ ಒಂದಷ್ಟು ಖುಷಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತಷ್ಟು ಕಡಿಮೆ ಆಗಿ ಕೈಗೆಟುಕುವ ದರದಲ್ಲಿ ಸಿಗುವ ನಿರೀಕ್ಷೆ ಇದೆ.