ಪ್ರಜ್ವಲ್ ಎಲ್ಲಿದಿಯಾಪ್ಪಾ.? ಜನರ ಮಧ್ಯೆ ಇರೋದ್ ಬಿಟ್ಟು ಎಲ್ಲಿ ಅಡಗಿಕೊಂಡಿದ್ಯಾ”: ಹೆಚ್ಚಾಯ್ತು ಜನಾಕ್ರೋಶ
ಹಾಸನ: ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಂತೆ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವ ಆರೋಪವೊಂದು ಎದುರಾಗಿತ್ತು. ಇದೀಗ ಪ್ರಜ್ವಲ್ ಅವರ ಪ್ರತಿಕೃತಿಯನ್ನು ಧಹಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಸಹ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಇದೇ ವಿಚಾರವಾಗಿ ಜನರ ಬಾಯಲ್ಲಿ ಮತ್ತೊಂದು ಸ್ಫೋಟಕ ಕೂಗೊಂದು ಜೋರಾಗಿ ಕೇಳಿ ಬರುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಸಿನಿಮಾ 2016ರಲ್ಲಿ ರಿಲೀಸ್ ಆಗಿದ್ದು, ಈ ವೇಳೆಯೇ ನಿಖಿಲ್ ಎಲಿದಿಯಪ್ಪಾ ಎನ್ನುವುದು ಕಾಮಿಡಿ ವಿಚಾರವಾಗಿ ತುಂಬಾ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳ ಬಳಿ ನಾನು ಜನರ ಮಧ್ಯದಲ್ಲೇ ಇದ್ದೀನಿ ಎಂದು ಹೇಳಿದ್ದರು. ಇದೀಗ 2024ರಲ್ಲಿ ಪ್ರಜ್ವಲ್ ಇಲ್ಲಿದಿಯಪ್ಪಾ ಎನ್ನುವ ಕೂಗುಗಳು ಇಡೀ ರಾಜ್ಯಾಂತ ಕೇಳಿಬರುತ್ತಿದೆ. ಯಾಕೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ಇಡೀ ದೇಶವೇ ಕ್ಯಾಕರಿಸಿ ಉಗಿಯುವಂತಹ ಕಾಮ ಕಾಂಡದ ಅಶ್ಲೀಲ ವಿಡಿಯೋ ಪ್ರಕರಣ ಜಗ ಜಾಹೀರಾದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣನ ಪುತ್ರ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನದಿಂದ ವಿದೇಶ (ಜರ್ಮನಿ)ಕ್ಕೆ ಪಲಾಯನ ಮಾಡಿದ್ಧಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯದಲ್ಲಿ ಆಕ್ರೋಶಗಳು ಭಗಿಲೆದ್ದಿವೆ.
ಇದೀಗ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಅವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಇವರಿಬ್ಬರ ಪ್ರತಿಕೃತಿಗಳು ಧಹಿಸಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ “ಪ್ರಜ್ವಲ್ ಎಲ್ಲಿದಿಯಪ್ಪಾ?” ಇಲ್ಲೇ “ಜನರ ಮಧ್ಯದಲ್ಲಿ ಇರೋದು ಬಿಟ್ಟು ಎಲ್ಲಿ ಅಡಗಿಕೊಂಡಿಯಪ್ಪಾ? ಎಂದು ಪ್ರಶ್ನಿಸುವ ಮೂಲಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವ ಬಗ್ಗೆ ಕೇಳಿದ್ದು, ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಮಾಡಿರುವ ಎನ್ನಲಾದ ಪೆನ್‌ಡ್ರೈವ್ ಅಶ್ಲೀಲ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚೆಲ್ಲಾಡುತ್ತಿವೆ. ಇನ್ನು ಈ ಬಗ್ಗೆ ರಾಜಕೀಯಲ್ಲಿ ಚರ್ಚೆಗಳು ಕೂಡ ಶುರುವಾಗಿವೆ. ಮತ್ತೊಂದೆಡೆ ತನಿಖೆಗಿಳಿದಿರುವ ಎಸ್‌ಐಟಿ ತಂಡ ಪ್ರಕರಣದ ಹಿಂದೆ ಇನ್ನೂ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿಯನ್ನು ಜಲಾಡಲು ಮುಂದಾಗಿದೆ. ಜೊತೆಗೆ ಪ್ರಜ್ವಲ್ ಅವರನ್ನು ಜರ್ಮಿನಿಯಿಂದಲೂ ಕರೆತಂದು ತನಿಖೆಗೆ ಒಳಪಡಿಸಲು ಸಜ್ಜಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.