ಸಿಎಂ ಭೇಟಿ ಬೆನ್ನಲ್ಲೇ ನೇಹಾ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಜೇವಭಯವಿದೆ ಎಂದಿದ್ದ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ
ಹುಬ್ಬಳ್ಳಿ, ಏಪ್ರಿಲ್ 26: ಹುಬ್ಬಳ್ಳಿಯ ಕಾಲೇಜಿನಲ್ಲಿ ಕೊಲೆಯಾ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಹಿರೇಮಠ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿಯಾದ ಬೆನ್ನಲ್ಲೆ ನಿವಾಸಕ್ಕೆ ಪೊಲೀಸ್ ಬೀಗಿ ಭದ್ರತೆ ಒದಗಿಸಲಾಗಿದೆ.
ನೇಹಾ ಹತ್ಯೆಗೆ ಸಂಬಂಧಿಸಿದಂತೆ ತನಗೆ ಕೆಲವರಿಂದ ಜೀವ ಬೆದರಿಕೆ ಇದೆ ಎಂದು ನಿರಂಜನಯ್ಯ ಗುರುವಾರ ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದರು. ಈ ಕಾರಣದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಘಟಕ ಶುಕ್ರವಾರ ಅವರಿಗೆ ಶಸ್ತ್ರಸಜ್ಜಿತ ಒಬ್ಬ ಅಂಗರಕ್ಷಕರನ್ನು ಭದ್ರತೆ ನಿಯೋಜಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮನೆಗೆ ಬಂದಿದ್ದ ಅನುಮಾನಾಸ್ಪದ ವ್ಯಕ್ತಿಗಳು
ಅಲ್ಲದೇ ಮಗಳ ಸಾವಿನ ಘಟನೆ ಬಳಿಕ ಕುಟುಂಬಸ್ಥರಿಗೆ ಮತ್ತು ತಮಗೆ ಸಾಂತ್ವನ ಹೇಳುವ ನೆಪದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮನೆಗೆ ಬಂದು ಹೋಗಿದ್ದನ್ನು ಗಮನಿಸಿದ್ದೇನೆ. ಮಗಳು ಇದ್ದ ಬೆಡ್‌ರೂಮಿನ ವಿಡಿಯೊ ಸಹ ಮಾಡಿಕೊಂಡು ಹೋಗಿದ್ದಾರೆ ಎಂದು ತಂದೆ ನಿರಂಜನ್ ಹಿರೇಮಠ ಆರೋಪಿಸಿದರು.
ನೇಹಾ ಕುಟುಂಬಕ್ಕೆ ಜೀವ ಬೆದರಿಕೆ
ಇದೆಲ್ಲ ನೋಡಿದರೆ ನಮ್ಮ ಕುಟುಂಬದವರ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಜೀವ ಬೆದರಿಕೆ ಬಗ್ಗೆಯು ತನಿಖೆ ನಡೆಯಬೇಕು ಎಂದು ಮೃತ ನೇಹಾಳ ತಂದೆ ಒತ್ತಾಯಿಸಿದ್ದರು. ಹುಬ್ಬಳ್ಳಿಯ ಬಿಡನಾಳದಲ್ಲಿ ಇರುವ ಅವರ ನಿವಾಸಕ್ಕೂ ಇಬ್ಬರು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ.