ಸಂಜೆ 5 ಗಂಟೆಗೆ ವೇಳೆಗೆ ಕರ್ನಾಟಕದಲ್ಲಿ 63.9% ಮತದಾನ
ಬೆಂಗಳೂರು, ಏಪ್ರಿಲ್. 26: ಲೋಕಸಭೆ ಚುನಾವಣೆ 2024ರ 2ನೇ ಹಂತದ ಮತದಾನ ಏಪ್ರಿಲ್ 26ರ ಶುಕ್ರವಾರ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಸೇರಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
2ನೇ ಹಂತದಲ್ಲಿ 13 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇವುಗಳಲ್ಲಿ ಕೇರಳ 20, ಕರ್ನಾಟಕ 14, ರಾಜಸ್ಥಾನದ 13, ಮಹಾರಾಷ್ಟ್ರ 8, ಉತ್ತರ ಪ್ರದೇಶ 8, ಮಧ್ಯ ಪ್ರದೇಶದ 7, ಅಸ್ಸಾಂ 5, ಬಿಹಾರ 5, ಛತ್ತೀಸ್‌ಗಢ 3, ಪಶ್ಚಿಮ ಬಂಗಾಳ 3, ಜಮ್ಮು ಮುತ್ತು ಕಾಶ್ಮೀರ, ಮಣಿಪುರ ಮತ್ತು ತ್ರಿಪುರ ರಾಜ್ಯದ ತಲಾ 1 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಲೋಕಸಭೆ ಚುನಾವಣೆಯ ಮತದಾನದ ಚಿತ್ರಣ, ನಾಯಕರ ಪ್ರತಿಕ್ರಿಯೆ, ಪೋಟೋ, ವಿಡಿಯೋ, ಮತದಾನದ ಪ್ರಮಾಣ ಸೇರಿದಂತೆ ಚುನಾವಣೆಯ ಸಂಪೂರ್ಣ ಚಿತ್ರಣ ಈ ಪುಟದಲ್ಲಿ ಸಿಗಲಿದೆ. ಅರ್ಹರೆಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾವಣೆ ಮಾಡಿ.
ಕರ್ನಾಟಕ
ಕರ್ನಾಟಕದಲ್ಲಿ 63.9% ಮತದಾನ
ಸಂಜೆ 5 ಗಂಟೆ ವೇಳೆಗೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ 63.9% ಮತದಾನವಾಗಿದೆ. ಬೆಂಗಳೂರು ಕೇಂದ್ರದಲ್ಲಿ 48.61% ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 61.78% ಮತದಾನವಾಗಿದೆ. ಬೆಂಗಳೂರು ಉತ್ತರ 50.04%, ಬೆಂಗಳೂರು ದಕ್ಷಿಣ 49.37% ಮತದಾನವಾಗಿದೆ. ಚಾಮರಾಜನಗರ 69.6%, ಚಿಕ್ಕಬಳ್ಳಾಪುರ 70.97%, ಚಿತ್ರದುರ್ಗ 67%, ದಕ್ಷಿಣ ಕನ್ನಡ 71.83%, ಹಾಸನ 72.13%, ಕೋಲಾರ 71.26%, ಮಂಡ್ಯ 74.87%, ಮೈಸೂರು 65.85%, ತುಮಕೂರು 72.1%, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 72.13% ಮತದಾನವಾಗಿದೆ.