ನಾಳೆ (ಏ.26ಕ್ಕೆ) ಕರ್ನಾಟಕ ಮೊದಲ ಹಂತದ ಮತದಾನ: 14 ಕ್ಷೇತ್ರ, ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ
ಕರ್ನಾಟಕ : ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇನ್ನುಳಿದ 14 ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ.
ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ 14 ಕ್ಷೇತ್ರಗಳಲ್ಲಿ ಯಾರು ಯಾರ ವಿರುದ್ಧ ಸ್ಪರ್ಧಿಸಲಿದ್ದಾರೆ? ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಬಲ ಹೆಚ್ಚಿದೆ? ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಇಲ್ಲಿದೆ.
14 ಕ್ಷೇತ್ರಗಳಲ್ಲಿ ಯಾರ ವಿರುದ್ಧ ಯಾರು ಸ್ಪರ್ಧೆ?
ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ + ಜೆಡಿಎಸ್ ಅಭ್ಯರ್ಥಿ
ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ | ಬಿಜೆಪಿ + ಜೆಡಿಎಸ್ ಅಭ್ಯರ್ಥಿ | |
1
|
ಉಡುಪಿ-ಚಿಕ್ಕಮಗಳೂರು | ಜಯಪ್ರಕಾಶ್ ಹೆಗ್ಡೆ | ಕೋಟ ಶ್ರೀನಿವಾಸ್ ಪೂಜಾರಿ |
2
|
ಹಾಸನ | ಶ್ರೇಯಸ್ ಪಟೇಲ್ | ಪ್ರಜ್ವಲ್ ರೇವಣ್ಣ |
3
|
ದಕ್ಷಿಣ ಕನ್ನಡ | ಪದ್ಮರಾಜ್ | ಕ್ಯಾಪ್ಟನ್ ಬ್ರಿಜೇಶ್ ಚೌಟ |
4
|
ಚಿತ್ರದುರ್ಗ | ಚಂದ್ರಪ್ಪ | ಗೋವಿಂದ ಕಾರಜೋಳ |
5
|
ತುಮಕೂರು | ಮುದ್ದಹನುಮೇಗೌಡ | ವಿ.ಸೋಮಣ್ಣ |
6
|
ಮಂಡ್ಯ | ಸ್ಟಾರ್ ಚಂದ್ರು | ಹೆಚ್ಡಿ ಕುಮಾರಸ್ವಾಮಿ |
7
|
ಮೈಸೂರು-ಕೊಡಗು | ಎಂ ಲಕ್ಷ್ಮಣ್ | ಯದುವೀರ್ ಒಡೆಯರ್ |
8
|
ಚಾಮರಾಜನಗರ | ಸುನೀಲ್ ಬೋಸ್ | ಎಸ್ ಬಾಲರಾಜ್ |
9
|
ಬೆಂಗಳೂರು ಗ್ರಾಮಾಂತರ | ಡಿಕೆ ಸುರೇಶ್ | ಡಾ.ಸಿಎನ್ ಮಂಜುನಾಥ್ |
10
|
ಬೆಂಗಳೂರು ಉತ್ತರ | ಪ್ರೊ.ರಾಜೀವ್ ಗೌಡ | ಶೋಭಾ ಕರಂದ್ಲಾಜೆ |
11
|
ಬೆಂಗಳೂರು ಕೇಂದ್ರ | ಮನಸೂರ್ ಅಲಿಖಾನ್ | ಪಿಸಿ ಮೋಹನ್ |
12
|
ಬೆಂಗಳೂರು ದಕ್ಷಿಣ | ಸೌಮ್ಯಾ ರೆಡ್ಡಿ | ತೇಜಸ್ವಿ ಸೂರ್ಯ |
13
|
ಚಿಕ್ಕಬಳ್ಳಾಪುರ | ರಕ್ಷಾ ರಾಮಯ್ಯ | ಡಾ.ಕೆ ಸುಧಾಕರ್ |
14
|
ಕೋಲಾರ | ಕೆ.ವಿ.ಗೌತಮ್ | ಮಲ್ಲೇಶ್ ಬಾಬು |
ಈ ಬಾರಿ ಲೋಕಸಭಾ ಚುನಾವಣೆ ಭಾರೀ ಕುತೂಹಲವನ್ನು ಮೂಡಿಸಿದೆ. ವಿಶೇಷವಾಗಿ ಕರ್ನಾಟಕದಲ್ಲಿ ನೋಡುವುದಾದರೆ ಕೆಲ ಕ್ಷೇತ್ರಗಳನ್ನು ಹಾಟ್ ಸೀಟ್ ಅಂತಲೇ ಹೇಳಬಹುದು. ಅವುಗಳಲ್ಲಿ ಮೊದಲನೇಯ ಕ್ಷೇತ್ರ ಮಂಡ್ಯ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಜೊತೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ.