ಶ್ರೀ ಕ್ಷೇತ್ರ ಮುದ್ದಾಡಿ: ಜಾತ್ರಾ ಮಹೋತ್ಸವಕ್ಕೆ ಚಾಲನೆ ಗುತ್ತುಗಳಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಆಗಮನವಾಗಿ ನೆರವೇರಿದ ಧ್ವಜರೋಹಣ
ವೇಣೂರು: ಬಜಿರೆ ಗ್ರಾಮದ ಶ್ರೀ ಕ್ಷೇತ್ರ ಮುದ್ದಾಡಿಯ ಜಾತ್ರಾ ಮಹೋತ್ಸವಕ್ಕೆ ಇಂದು ಸಂಜೆ ಚಾಲನೆ ದೊರೆಯಿತು.
ಗುತ್ತುಗಳಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಆಗಮನವಾಗಿ ಧ್ವಜರೋಹಣ ನೆರವೇರಿತು.
ಬೆಳಿಗ್ಗೆ ಕ್ಷೇತ್ರದಲ್ಲಿ ಕುಂಞಡಿ ಲಕ್ಷ್ಮೀನಾರಾಯಣ ಅಸ್ರಣ್ಣರ ಪೌರೋಹಿತ್ಯದಲ್ಲಿ ಶುದ್ಧಕಲಶ, ಕುಂಭ ಪ್ರತಿಷ್ಠೆ ನಡೆಯಿತು.
ರಾತ್ರಿ ಬಲಿ ಉತ್ಸವ, ಶ್ರೀ ಮಾರವಾಂಡಿ, ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂದಾಯ ಹಾಗೂ ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಲಿದೆ.
ನಾಳೆ (ಎ. 23ರಂದು) ರಾತ್ರಿ ಗಂಟೆ 8-00 ರಿಂದ ಬಲಿ ಉತ್ಸವ ಬಳಿಕ ಶ್ರೀ ಬ್ರಹ್ಮ ಬೈದರ್ಕಳ ಮತ್ತು ಮಾಣಿಬಾಲೆ ನೇಮೋತ್ಸವ ಜರಗಲಿದೆ.
ಕ್ಷೇತ್ರದ ಆಡಳಿತ ಮೊಕ್ತೇಸರರಾದ ಯಂ. ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಕುಮಾರ್ ಆರಿಗ ಪೆರ್ಮಾಣುಗುತ್ತು, ಗುರಿಕಾರರು ಸೇರಿದಂತೆ ವಿವಿಧ ಗ್ರಾಮದ ಭಕ್ತಾಧಿಗಳು ಉಪಸ್ಥಿತರಿದ್ದರು.