ಕುಕ್ಕೇಡಿ ದಸಂಸ ವತಿಯಿಂದ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದ ಆಚರಣೆ
ಕುಕ್ಕೇಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಕುಕ್ಕೇಡಿ ನಿಟ್ಟಡೆ ಇದರ ವತಿಯಿಂದ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆಯನ್ನು ಕುಕ್ಕೇಡಿ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಶೇಖರ್ ಕುಕ್ಕೇಡಿ, ಕುಕ್ಕೇಡಿ ಗ್ರಾಮ ಪಂಚಾಯತಿನ ಸದಸ್ಯರಾದ ಶ್ರೀಮತಿ ಗುಣವತಿ ಡಿ, ಶ್ರೀಮತಿ ತೇಜಾಕ್ಷಿ, ಶ್ರೀಮತಿ ರಜನಿ, ವೇಣೂರು ಹೋಬಳಿ ಸಂಚಾಲಕರಾದ ಚರಣ್ ರಾಜ್ ನಿಟ್ಟಡೆ ಹಾಗೂ ಹೋಬಳಿ ಪದಾಧಿಕಾರಿಗಳು, ಗ್ರಾಮ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.