ಮೂಡುಕೋಡಿ ಸತ್ಯಸಾರಮಾನಿ ದೈವಸ್ಥಾನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ವೇಣೂರು : ಮೂಡುಕೋಡಿಯ ಕೊಪ್ಪದಬಾಕಿಮಾರು ಶ್ರೀ ಸತ್ಯ ಸಾರಮಾನಿ ದೈವಸ್ಥಾನದಲ್ಲಿ ಅ೦ಬೆಡ್ಕರ್ ಜಯಂತಿ ಆಚರಿಸಲಾಯಿತು.
ದೈವಸ್ಥಾನದ ಹಿರಿಯರಾದ ಬಾಬು ಕಲ್ಯರಡ್ಡ ಉಪಸ್ಥಿತರಿದ್ದರು.
ವೇಣೂರು ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ದೀಪ ಬೆಳಗಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಚ೯ನೆ ಗೈದು ಮಾತನಾಡಿ, ದೀನ ದಲಿತರ ಶೋಷಿತ ವಗ೯ದ ಧ್ವನಿಯಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದರು. ಕಾಯ೯ಕ್ರಮದಲ್ಲಿ ಹೊಸಮನೆ ಚ೦ದ್ರಶೇಖರ್ ಕೊಪ್ಪದ ಬಾಕಿಮಾರು, ಗ್ರಾಮ ಪ೦ಚಾಯತ್ ಮಾಜಿ ಸದಸ್ಯೆ ಚ೦ದ್ರಾವತಿ ಅಶೋಕ್ ಹೆಗ್ಡೆ ಬೆದ್ರಡ್ಡ, ಪ್ರಮುಖರಾದ ಸುಧಾಕರ ಹೊಸಮನೆ, ಶಶಿಧರ ಹೊಸಮನೆ, ಗಜೇಂದ್ರ ಪಾಲ್ದಡ್ಕ, ಆನಂದ ಪಾದೆಮನೆ, ಸದಾನಂದ ಹೊಸಮನೆ, ಗೀತಾ ಕೊಪ್ಪದಬಾಕಿಮಾರು, ಶೋಭಾ ಕಲ್ಯರಡ್ಧ, ಪ್ರಶಾಂತ್ ಹೊಸಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೈವಸ್ಥಾನ ಆಡಳಿತ ಸಮಿತಿ ಸದಸ್ಯ ಧರ್ಮರಾಜ್ ಕೊಪ್ಪದಬಾಕಿಮಾರು ಸ್ವಾಗತಿಸಿ, ನಿರೂಪಿಸಿದರು.