ಇಂದಿನಿಂದ ಎ16. ರ ವರೆಗೆ ವೈವಿಧ್ಯಮಯ ಹಣ್ಣುಗಳ ಬೃಹತ್ ಮೇಳ
ಮಳೆಯ ಋತು ಶುರುವಾಗುತ್ತಿದ್ದಂತೆ ಪ್ರತಿ ವರ್ಷದಂತೆ ಈ ವರ್ಷವು ಹಲಸು, ಮಾವು ಇನ್ನಿತರ ಹಣ್ಣಿನ ಸೀಸನ್ ಆರಂಭವಾಗಿದೆ. ಈ ಪ್ರಯುಕ್ತ ಇಂದಿನಿಂದ ಏಪ್ರಿಲ್ 16ರವರೆಗೆ ‘ಹಲಸು ಮತ್ತು ವೈವಿಧ್ಯಮಯ ಹಣ್ಣುಗಳ ಬೃಹತ್ ಮೇಳ’ ನಡೆಯುತ್ತಿದೆ.
ತಾಪಮಾನದಿಂದ ಕಂಗೆಟ್ಟಿದ್ದ ಜನರಿಗೆ ಮಳೆಯ ದರ್ಶನವಾಗಿ ಭೂಮಿಗೆ ತಂಪೆರೆಯುತ್ತಿದೆ. ಜನರು ಮನೆಯಿಂದ ಮೇಳ ಇನ್ನಿತರ ಕಾರ್ಯಕ್ರಮಗಳಿಗೆ ಬರುತ್ತಿದ್ದಾರೆ. ಈ ಮಹಾಮೇಳದಲ್ಲಿ ಕರ್ನಾಟಕ ವಿವಿಧ ಭಾಗಗಳಲ್ಲಿ ಸಿಗುವಂತಹ ತರಹೇವಾರಿ ವಿವಿಧ ತಳಿಯ ಹಲಸಿನ ಹಣ್ಣುಗಳು, ಮಾವು, ಬಾಳೆಗಳ ವೈವಿಧ್ಯಮಯ ತಳಿಗಳ ಹಣ್ಣನ್ನು ಇಲ್ಲಿ ಖರೀದಿಸಬಹುದು. ಹಣ್ಣುಗಳ ಕುರಿತು ಮಾಹಿತಿ ಪಡೆಯಬಹುದು.
ಹಣ್ಣಿನ ಮೇಳದ ವಿಳಾಸ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿಯ ಕೆ. ಅಮರನಾಥ ಶೆಟ್ಟಿ ಸಭಾಂಗಣ, ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ಈ ಹಲಸು ಸೇರಿದಂತೆ ಇನ್ನಿತರ ಹಣ್ಣುಗಳ ಮಹಾಮೇಳ ಆಯೋಜಿಸಲಾಗಿದೆ. ಇಲ್ಲಿ ಆಹಾರೋತ್ಸವ, ಕೃಷಿ ಪರಿಕರಗಳ ಮಾರಾಟವು ಇರಲಿದೆ. ಹಣ್ಣುಗಳ ಜೊತೆಗೆ ಇವುಗಳ ಖರೀದಿಗೂ ಅವಕಾಶ ಇದೆ.
ಮೊದಲ ದಿನವೇ ಅಪಾರ ಸಂಖ್ಯೆಯ ಜನ ಭೇಟಿ
ಭಾನುವಾರ ರಜಾದಿನವಾದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ದಾಂಗುಡಿ ಇಟ್ಟಿದ್ದಾರೆ. ಹಲಸು, ಮಾವುಗಳನ್ನುಉ ಕೇಜಿ ಗಟ್ಟಲೇ ಖರೀದಿಸುತ್ತಿದ್ದಾರೆ. ತರಹೇವಾರಿ ಹಣ್ಣುಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ರಂಬುಟನ್, ಮ್ಯಾಂಗೋಸ್ಟಿನ್, ಅನಾನಸು, ಪೇರಳೆ, ಬಟರ್‌ಫ್ರುಟ್ಸ್ ಅನೇಕ ಜಾತಿಯ ತಾಜಾ ಹಣ್ಣುಗಳು, ಬಗೆ ಬಗೆಯ ಹಸಿ ತರಕಾರಿಗಳು ಇಲ್ಲಿವೆ. ಜನರು ತಾವು ಈವರೆಗೂ ನೋಡಿದರ ಬೇರೆ ಬೇರೆ ಜಾತಿಯ, ರುಚಿಯ ಹಣ್ಣಗಳನ್ನು ಇಲ್ಲಿ ಸವಿಯುತ್ತಿದ್ದಾರೆ.
ಮೇಳದಲ್ಲಿ ಏನೆಲ್ಲಾ ಇರಲಿದೆ?
ಮೇಳದಲ್ಲಿ ಹಣ್ಣುಗಳನ್ನು ಸ್ಥಳದಲ್ಲಿಯೇ ಕತ್ತರಿಸಿ ಜ್ಯೂಸ್ ಮಾಡಿಕೊಡುವ ಅಂಗಡಿಗಳಿಗೆ ಜಾಗ ಕೊಡಲಾಗಿದೆ. ತಾಪಮಾನ ಹೆಚ್ಚಿರುವ ಕಾರಣ ಈ ಮಳಿಗೆಗಳಲ್ಲಿ ವಿಪರೀತ ಜನ ತುಂಬಿದ್ದು ಕಂಡು ಬಂತು. ಜೊತೆಗೆ ಹಣ್ಣೂ ಮತ್ತು ತರಕಾರಿಗಳ ಸಲಾಡ್, ತಾಜಾ ತಿನಿಸುಗಳು ಇಲ್ಲಿ ಕಂಡು ಬಂದವು. ಮಹಿಳೆಯರು, ಮಕ್ಕಳು ಸಮೇತ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಭಾನುವಾರದ ವರೆಗೆ ಈ ಮಹಾಮೇಳ ಇರಲಿದೆ.
ಇಲ್ಲಿನ ಬೃಹತ್ ಆಹಾರ ಮೇಳವು ಹಣ್ಣುಗಳ ಮೇಳದಲ್ಲಿ ಮತ್ತೊಂದು ಆಕರ್ಷಣೆ ಆಗಿತ್ತು. ಇಲ್ಲಿ ಒಟ್ಟು ಸುಮಾರು ಐವತ್ತು ಮಳಿಗೆಗಳು ಇದ್ದುವ. ದೇಶೀಯ ಮತ್ತು ಪ್ರಾದೇಶಿಕ ಆಹಾರ ಪ್ರಿಯರಿಗೆ ಈ ಮಳಿಗೆಗಳು ರಸದೌತಣವನ್ನು ಉಣಬಡಿಸಲಿವೆ. ಮಾರಾಟ ಮಾಡುವ ಆಹಾರೋತ್ಪನ್ನಗಳು ಸಂಪೂರ್ಣ ಸಸ್ಯಹಾರವಾಗಿವೆ. ಮಾಂಸಾಹಾರ ಇಲ್ಲಿ ನಿರ್ಬಂಧಿಸಲಾಗಿದೆ.
ದಿನಬಳಕೆ, ಅಲಂಕಾರಿ ವಸ್ತುಗಳು ಲಭ್ಯ
ಗೃಹ ಬಳಕೆಗೆ ಬೇಕಾಗುವ ನಿತ್ಯದ ವಸ್ತುಗಳು, ಅಲಂಕಾರಿ ವಸ್ತುಗಳು, ಕಟ್ಟಿಗೆ, ಗಾಜು ಇನ್ನಿತರ ವಸ್ತುಗಳ ಸೂಕ್ಷ್ಮ ಕೆತ್ತನೆಯ ವಸ್ತುಗಳು ಇಲ್ಲಿವೆ. ಬೇಸಿಗೆ ಹಿನ್ನೆಲೆಯಲ್ಲಿ ಮಣ್ಣಿನ ಮಡಕೆಗಳು, ಗುಡಿ ಕೈಗಾರಿಕೆ ವಸ್ತುಗಳು, ಖಾದಿ ಬಟ್ಟೆ, ಕೃಷಿ ಪರಿಕರಗಳು, ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟಕ್ಕೆ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ.