December 23, 2024

ಫ್ರಿಡ್ಜ್‌ನಲ್ಲಿಟ್ಟ ನೀರಿನಲ್ಲಿ ಇರಲ್ಲ ಮಣ್ಣಿನ ಮಡಿಕೆಯಲ್ಲಿ ಇಟ್ಟ ನೀರಿನಲ್ಲಿರುವ ಈ ಅದ್ಭುತ ಗುಣಗಳು

0

ಈ ಬೇಸಿಗೆಯಲ್ಲಿ ತಂಪಾದ ನೀರು ಕುಡಿಯಬೇಕೆನಿಸುತ್ತದೆ, ಹಾಗಾಗು ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯಲು ಇಷಷ್ಟಪಡುತ್ತೇವೆ, ತಣ್ಣನೆಯ ನೀರು ಗಂಟಲಿನಿಂದ ಇಳಿಯುವಾಗ ಖುಷಿಯಾಗುವುದು, ಅದೇ ಖುಷಿ ಬರಿ ತಣ್ಣೀರು ಕುಡಿದಾಗ ಅನಿಸುವುದಿಲ್ಲ.

ಆದರೆ ಈ ಪ್ರಿಡ್ಜ್‌ನಲ್ಲಿಟ್ಟ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ, ಈ ಪ್ರಿಡ್ಜ್‌ನಲ್ಲಿಟ್ಟ ನೀರಿನಂತೆ ತಣ್ಣಗಿರುವ ರುಚಿಯಾಗಿರುವ ನೀರು ಸಿಗುವಾಗ ಈ ಫ್ರಿಡ್ಜ್‌ ನೀರು ಏಕೆ ಅಲ್ವಾ? ಅದುವೇ ಮಡಿಕೆಯಲ್ಲಿಟ್ಟ ನೀರು. ಈ ಮಣ್ಣಿನ ಮಡಿಕೆಯಲ್ಲಿ ನೀರಿನ ಗುಣಗಳ ಬಗ್ಗೆ ನೋಡೋಣ ಬನ್ನಿ.

ವಿಟಮಿನ್ ನಷ್ಟವಾಗಲ್ಲ
ಮಣ್ಣಿನ ಮಡಿಕೆಯಲ್ಲಿ ನೀರನ್ನು ಇಡುವುದರಿಂದ ಆ ನೀರು ಶುದ್ಧವಾಗಿಯೂ ಇರುತ್ತದೆ ಅಲ್ಲದೆ ಆ ನೀರಿನಲ್ಲಿ ವಿಟಮಿನ್‌ಗಳು ನಷ್ಟವಾಗುವುದಿಲ್ಲ, ಅದೇ ನಿಮಗೆ ಫಿಲ್ಟರ್‌ ಮಾಡಿದ ನೀರಿನಲ್ಲಿ ಸಿಗುವುದಿಲ್ಲ. ಆದ್ದರಿಂದ ನೀರೂ ರುಚಿಯಾಗಿರುತ್ತದೆ, ವಿಟಮಿನ್‌ಗಳೂ ದೊರೆಯುವುದು.

ಈ ಬೇಸಿಗೆಗೆ ತುಂಬಾನೇ ಒಳ್ಳೆಯದು
ಎಂಥ ಉರಿ ಬಿಸಿಲು ಅಲ್ವಾ? ಈ ಬಿಸಿಲಿನಲ್ಲಿ ಹೊರಗಡೆ ಹೋದರೆ ತಲೆಸುತ್ತು, ಸನ್‌ಸ್ಟ್ರೋಕ್ ಅಪಾಯವಿದೆ. ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಕುಡಿಯುವುದರಿಂದ ಸನ್‌ಸ್ಟ್ರೋಕ್ ತಡೆಗಟ್ಟಲು ಸಹಕಾರಿ. ಏಕೆಂದರೆ ಇದರಲ್ಲಿ ಖನಿಜಾಂಶಗಳು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡುತ್ತದೆ, ಇದರಿಂದಾಗಿ ಈ ನೀರು ಕುಡಿದರ ಸುಸ್ತಾಗಲ್ಲ, ಬೇಗನೆ ಬಾಯಾರಿಕೆ ನೀಗುವುದು.

 

ಈ ನೀರು ಚಯಪಚಯ ಕ್ರಿಯೆಗೆ ತುಂಬಾನೇ ಒಳ್ಳೆಯದು
ನೀವು ಮಣ್ಣಿನ ಮಡಿಕೆಯಲ್ಲಿ ನೀರು ಹಾಕಿ ಕುಡಿಯುವುದರಿಂದ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು, ಈ ನೀರು ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು. ದೇಹದಲ್ಲಿ ಖನಿಜಾಂಶಗಳ ಕಡಿಮೆಯಾದರೆ ಆರೋಗ್ಯ ಸಮಸ್ಯೆ ಉಂಟಾಗುವುದು. ಈ ಮಣ್ಣಿನ ಮಡಿಕೆಯಲ್ಲಿ ಹಾಕಿದ ನೀರು ಕುಡಿಯುವುದರಿಂದ ದೇಹಕ್ಕೆ ಖನಿಜಾಂಶಗಳು ದೊರೆಯುತ್ತದೆ.

 

ಈ ನೀರು ಕುಡಿದರೆ ಗಂಟಲು ನೋವು ಬರಲ್ಲ
ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿದಾಗ ಗಂಟಲು ನೋವು ಬರುವುದು. ಅದೇ ಮಡಿಕೆಯಲ್ಲಿಟ್ಟ ನೀರು ಕುಡಿಯುವಾಗ ತುಂಬಾನೇ ತಂಪಾಗಿರುತ್ತದೆ, ಗಂಟಲು ನೋವು ಉಂಟಾಗುವುದಿಲ್ಲ. ಇನ್ನು ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿದಾಗ ಆ ಕ್ಷಣಕ್ಕೆ ಬಾಯಾರಿಕೆ ನೀಗಿದಂತಾಗುವುದು, ಆದರೆ ನಂತರ ಪುನಃ ಬಾಯಾರಿಕೆಯಾಗುವುದು, ಮಡಿಕೆಯ ನೀರು ನಮ್ಮ ದಾಹವನ್ನು ನೀಗಿಸುತ್ತದೆ.

ಅಸಿಡಿಟಿ ತಡೆಗಟ್ಟುತ್ತದೆ
ಮಣ್ಣಿನ ಮಡಿಕೆಯ ನೀರು ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟುತ್ತದೆ ಕೆಲವೊಂದು ಆಹಾರಗಳು ಅಸಿಡಿಟಿ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟು ಮಾಡುತ್ತದೆ. ಮಣ್ಣಿನ ಮಡಿಕೆಯ ನೀರು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆಯಾಗುವುದು.

 

ಪಿಎಚ್ ಮಟ್ಟ ಕಡಿಮೆ ಇರುತ್ತದೆ
ಮಣ್ಣಿನಲ್ಲಿರುವ ಲವಣಗಳು ಕ್ಷಾರೀಯವಾಗಿವೆ. ಯಾವುದೇ ಸೆಲೆಯಿಂದ ಬಂದ ನೀರು ಕೊಂಚವಾದರೂ ಆಮ್ಲೀಯತೆ ಹೊಂದಿರುತ್ತದೆ. ಮಣ್ಣಿನಲ್ಲಿರುವ ಲವಣಗಳು ಈ ಆಮ್ಲಗಳನ್ನು ತಟಸ್ಥಗೊಳಿಸಿ ನೀರಿನ ಪಿಎಚ್ ಮಟ್ಟವನ್ನು ಸೊನ್ನೆಗಿಳಿಸುತ್ತವೆ. ಇದೇ ಕಾರಣದಿಂದ ನೆಲದಿಂದ ಉಕ್ಕಿದ ಅಥವಾ ಬಂಡೆಗಳ ನಡುವೆ ಬರುವ ನೀರು ಕುಡಿಯಲು ಯೋಗ್ಯವಾಗಿರುತ್ತದೆ.

 

ಯಾವ ಮಡಿಕೆ ಒಳ್ಳೆಯದು?
ಮಣ್ಣಿನಿಂದ ಮಾಡಿದ ಯಾವುದೇ ಮಡಿಕೆ ಖರೀದಿಸುವಾಗ ಅದು ಸುಟ್ಟ ಮಡಿಕೆಯಾಗಿರಬೇಕು. ಸುಡದ ಅಥವಾ ಬಿಸಿಲಿನಲ್ಲಿ ಒಣಗಿಸಿದ ಮಡಿಕೆಯಲ್ಲಿ ನೀರು ಇಟ್ಟರೆ ನೀರು ತಂಪಾಗಿ ಇರುವುದಿಲ್ಲ. ಸುಟ್ಟ ಮಡಿಕೆಯಲ್ಲಿ ಮಾತ್ರ ಸೂಕ್ಷ್ಮ ರಂಧ್ರಗಳು ಇದ್ದು ನೀರಿನಿಂದ ಉಷ್ಣಾಂಶ ಕೂಡ ಕೂಡ ಹೊರ ಹೋಗುತ್ತದೆ. ಹೀಗಾಗಿ ಮಡಿಕೆಯ ನೀರು ತಂಪಾಗುವುದು.

 

ಬಣ್ಣ ಹೊಡೆದ ಮಡಿಕೆ ಬಳಸಬೇಡಿ
ಯಾವುದೇ ಕಾರಣಕ್ಕೂ ಮಡಿಕೆಯ ಹೊರಭಾಗಕ್ಕೆ ಬಣ್ಣ ಹೊಡೆಯಬಾರದು. ಮಡಿಕೆಯಲ್ಲಿಟ್ಟ ನೀರನ್ನು ಗರಿಷ್ಠ ಮೂರು ದಿನಗಳ ಒಳಗೆ ಬಳಸಬೇಕು. ಇಲ್ಲದಿದ್ದರೆ ಈ ನೀರನ್ನು ಪೂರ್ಣವಾಗಿ ಖಾಲಿ ಮಾಡಿ ಹೊಸ ನೀರನ್ನು ಹಾಕಬೇಕು. ವಾರಕ್ಕೊಮ್ಮೆ ಒಳಭಾಗವನ್ನು ಉಜ್ಜಿ ಸ್ವಚ್ಛಗೊಳಿಸಿ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು