December 24, 2024

ಕ್ಯಾನ್ಸರ್ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮೂಡುಕೋಡಿಯ ಅಣ್ಣು ಶೆಟ್ಟಿಯವರ ಚಿಕಿತ್ಸೆಗೆ ನೆರವಾಗುವಿರಾ?

0

ವೇಣೂರು: ಮೂಡುಕೋಡಿ ಗ್ರಾಮದ ಬೆದ್ರಡ್ಡ ನಿವಾಸಿ ಅಣ್ಣು ಶೆಟ್ಟಿ ಅವರು ಕ್ಯಾನ್ಸರ್ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಈಗಾಗಲೇ ರೂ. 2 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಚಿಕಿತ್ಸೆ ಮುಂದುವರಿಸಲು ಇನ್ನೂ ಒಂದೂವರೆ ಲಕ್ಷ ಹಣದ ಅವಶ್ಯಕತೆ ಇದ್ದು, ಆರ್ಥಿಕ ಸಹಾಯಕ್ಕಾಗಿ ಬಡಪಾಯಿ ಕುಟುಂಬ ದಾನಿಗಳ ಮೊರೆ ಹೋಗಿದೆ.

ವೇಣೂರಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಅಣ್ಣು ಶೆಟ್ಟಿಯವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆಗೊಳಪಡಿಸಿದಾಗ ಕ್ಯಾನ್ಸರ್ ಸಂಬಂಧಿ ಖಾಯಿಲೆ ಗೊತ್ತಾಗಿದೆ. ವಿಷಯ ತಿಳಿದ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದ್ದು, ಈಗಾಗಲೇ ಲಕ್ಷಾಂತರ ರೂ. ಸಾಲ ಮಾಡಿ ಚಿಕಿತ್ಸೆಗೆ ವಿನಿಯೋಗಿಸಿದ್ದಾರೆ.

ಬಡಕುಟುಂಬಕ್ಕೆ ಮನೆ ನಿರ್ವಹಣೆಯೇ ಕಷ್ಟವಾಗಿರುವಾಗ ಇನ್ನೂ ಲಕ್ಷಾಂತರ ರೂಪಾಯಿ ಚಿಕಿತ್ಸೆ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿದ್ದು, ಆರ್ಥಿಕ ಸಹಾಯ ಮಾಡುವಂತೆ ದಾನಿಗಳ ಮೊರೆ ಹೋಗಿದ್ದಾರೆ.

ಆರ್ಥಿಕ ಸಹಾಯ ನೀಡಲಿಚ್ಚಿಸುವ ದಾನಿಗಳು ಗೋಪಿ ಶೆಟ್ಟಿಯವರ ಗೂಗಲ್ ಪೇ ಸಂಖ್ಯೆ
9448943957 ಅಥವಾ ರಾಜೇಶ್ ಶೆಟ್ಟಿ 9591321948 ಸಂಖ್ಯೆಗೆ ಕಳುಹಿಸಬಹುದಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು