December 23, 2024

ಧರ್ಮಸ್ಥಳದಿಂದ ಚಿಕಿತ್ಸಾ ವೆಚ್ಚ ರೂ. 25,000 ಸಹಾಯಧನ

0

 

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಶ್ರೀಕೃಷ್ಣ ಸ್ವ-ಸಹಾಯ ಸಂಘದ ಯೋಗೀಶ್ ದೇವಾಡಿಗರ ತಂದೆಗೆ ಪಿತ್ತಕೋಶದ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿಶೇಷವಾಗಿ ಪೂಜ್ಯ ಖಾವಂದರು ಮಂಜೂರು ಮಾಡಿರುವ ರೂ. 25,000 ಮೊತ್ತದ ಮಂಜೂರಾತಿ ಪತ್ರ ಹಾಗೂ ಚೆಕ್ಕನ್ನು ಉಜಿರೆ ಎ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಲೀಲಾವತಿಯವರು ವಿತರಿಸಿದರು.

ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಸುರೇಂದ್ರ, ತಾಲ್ಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್ ಮಾರ್ನಾಡ್, ಮೇಲ್ವಿಚಾರಕಿಯಾದ ಶ್ರೀಮತಿ ವನಿತ ಹಾಗೂ ಒಕ್ಕೂಟದ ಪದಾಧಿಕಾರಿಯಾದ ದೇವರಾಜ್, ಸೇವಾ ಪ್ರತಿನಿಧಿ ಶ್ರೀಮತಿ ಪ್ರೇಮಲತಾ, ಪ್ರಮೀಳಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು