ಯದುವೀರ್ ಒಡೆಯರ್ ಆಸ್ತಿ ಘೋಷಣೆ: ಸ್ವಂತ ಕಾರು, ಜಮೀನು ಇಲ್ಲದ ಅರಮನೆ ಒಡೆಯ
ಮೈಸೂರು, ಏಪ್ರಿಲ್, 01: ಲೋಕಸಭೆ ಚುನಾವಣೆಗೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ಅಲ್ಲದೆ ಬಹುತೇಕ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆಯಾಗಿದೆ. ಹಾಗೆಯೇ ಮೈಸೂರು-ಕೊಗಡು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಘೋಷಣೆ ಮಾಡಲಾಗಿದ್ದು, ಇಂದು ಅವರು ನಾಪಪತ್ರ ಸಲ್ಲಿಸಿದ್ದಾರೆ.
ಜ್ಯೋತಿಷಿಗಳ ಸೂಚನೆಯಂತೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಶುಭ ಗಳಿಗೆ ಸಿಕ್ಕಿದ್ದರಿಂದ ಇಂದು ಒಂದು ಸೆಟ್ ನಾಮಪತ್ರ ಸಲ್ಲಿಸಲಾಯಿತು. ಏ.3ರಂದು ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನದ ಮೂಲಕ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲಿದ್ದಾರೆ