January 14, 2025

ನಾಪತ್ತೆಯಾಗಿದ್ದ ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷೀನಾರಾಯಣ ಅವರು ಶವವಾಗಿ ಪತ್ತೆ!

0

 

ಬೆಳ್ತಂಗಡಿ: ಮಡಂತ್ಯಾರು ಮಾಲಾಡಿ ಗ್ರಾಮದ ವಿದ್ಯಾನಗರ ನಿವಾಸಿ, ವೇಣೂರು ಗ್ರಾಮ ಪಂಚಾಯತ್ ನಲ್ಲಿ ಸುದೀರ್ಘ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮೀನಾರಾಯಣ (52) ಅವರು ಇತ್ತೀಚಿಗೆ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಬೆಳ್ತಂಗಡಿ ತಾಲೂಕಿನ ಪಟ್ರಮೆ ಹೊಳೆಯಲ್ಲಿ ಭಾನುವಾರ ಪತ್ತೆಯಾಗಿದೆ.

ಕಳೆದ 6 ವರ್ಷಗಳಿಂದ ಅವರು ಬಂಟ್ವಾಳ ತಾಲೂಕು ಅಮ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮಾ.27 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿ ಬರುವುದಾಗಿ ತನ್ನ ಪತ್ನಿಗೆ ತಿಳಿಸಿ ಹೋದವರು ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ಅವರು ಬಂದಿರಲಿಲ್ಲ, ಈ ಬಗ್ಗೆ ವಿಷಯ ತಿಳಿದ ಮನೆಯವರು ಅಮ್ಮಾಡಿ ಪಂಚಾಯತ್ ನಲ್ಲಿ ವಿಚಾರಿಸಿದಾಗ, ಅಲ್ಲಿನ ಸಿಬ್ಬಂದಿಗಳು ಕಾಯ೯ದಶಿ೯ಯವರು ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಿ ಹೋಗಿರುವುದಾಗಿ ತಿಳಿಸಿದ್ದರು. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಲಕ್ಷ್ಮೀನಾರಾಯಣ ರವರು ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿ ಅವರ ಮನೆಯವರು ನೀಡಿದ ದೂತಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಮಾ.31 ರಂದು ನಾಪತ್ತೆಯಾಗಿ ನಾಲ್ಕು ದಿನಗಳ ಬಳಿಕ ಪಟ್ರಮೆ ಸೇತುವೆ ಬಳಿ ಅವರ ಬೈಕ್ ದೊರಕಿತ್ತು. ಬೈಕ್ ದೊರೆತ ಬಳಿಕ ಇಲ್ಲಿ ಅವರಿಗಾಗಿ ಹುಡುಕಾಟ ನಡೆಯುತ್ತಿತ್ತು ಇಂದು ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಶವವನ್ನು ಮೇಲೆತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *