ಏಪ್ರಿಲ್ ಮೊದಲ ವಾರದಲ್ಲೇ ದ.ಕ. ಸಹಿತ ರಾಜ್ಯದ ಅಲ್ಲಲ್ಲಿ ಭರ್ಜರಿ ಮಳೆ ಭಾರತೀಯ ಹವಾಮಾನ ಇಲಾಖೆಯಿಂದ ದೊಡ್ಡ ಗುಡ್ ನ್ಯೂಸ್!
ಮಳೆಗಾಗಿ ಎಲ್ಲರೂ ಕಾದು ಕುಳಿತಿದ್ದಾರೆ, ಯಾಕಂದ್ರೆ ಎಲ್ಲೆಲ್ಲೂ ಮಳೆಗಾಗಿ ಹಾಹಾಕಾರವು ಶುರುವಾಗಿದೆ. ಕೆರೆ & ಕಟ್ಟೆ ಸೇರಿದಂತೆ ನದಿಗಳು ಸಂಪೂರ್ಣ ಒಣಗಿ ಹೋಗಿವೆ. ಹೀಗಾಗಿ, ಸದ್ಯಕ್ಕೆ ಮಳೆ ಬೀಳದೆ ಇದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂಬ ಭಯ ಕಾಡುತ್ತಿದೆ. ಇಂತಹ ಹೊತ್ತಲ್ಲೇ ಮಳೆಯ ಆರ್ಭಟವೂ ಶುರುವಾಗಿದೆ! ಕರ್ನಾಟಕದ ಮಳೆ ಸುದ್ದಿ ಬಗ್ಗೆ ತಿಳಿಯಲು ಮುಂದೆ ಓದಿ.
2023 ಕರ್ನಾಟಕದ ಪಾಲಿಗೆ ದುರದೃಷ್ಟಕರ ವರ್ಷ. ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಮಳೆಯನ್ನ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿತ್ತು. ಕರ್ನಾಟಕ ಸೇರಿ ಭಾಗಶಃ ಇಡೀ ದೇಶ ಸಾಕಷ್ಟು ಮಳೆ ಕೊರತೆ ಎದುರಿಸಿ ಒದ್ದಾಡಿದೆ. ಕೆಲವು ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ ಹಲವಾರು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಮಳೆಯ ವಿಚಾರವಾಗಿ ಏಪ್ರಿಲ್ ಮೊದಲ ವಾರದಲ್ಲಿ ಗುಡ್ ನ್ಯೂಸ್ ಸಿಗಲಿದೆ, ಭರ್ಜರಿ ಮಳೆಯೂ ಬೀಳಲಿದೆಯಂತೆ!
ಕರ್ನಾಟಕದಲ್ಲಿ ಮಳೆ ಗ್ಯಾರಂಟಿ!
ಮನುಷ್ಯನ ಅತಿಯಾದ ಆಸೆ ಪ್ರಕೃತಿ ಮೇಲೆ ಮನುಷ್ಯ ನಡೆಸಿದ ನಿರಂತರವಾಗಿ ದೌರ್ಜನ್ಯದಿಂದ ಭೂಮಿ ಮಲೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಕಾರಣಕ್ಕೆ, ಮಳೆ ಸರಿಯಾಗಿ ಬರುತ್ತಿಲ್ಲ ಎಂಬುದು ವಿಜ್ಞಾನಿಗಳ ವಾದ. ಇದೆಲ್ಲಾ ಏನೇ ಇರಲಿ ನಮಗೆ ಮಳೆ ಬೇಕು ಅಷ್ಟೇ ಅಂತಿದ್ದಾರೆ ಜನ. ಒಂದ್ಕಡೆ ಮಳೆ ಇಲ್ಲದೆಯೇ ಕರ್ನಾಟಕದ ಡ್ಯಾಂಗಳು ಬತ್ತಿವೆ. ಇನ್ನೇನು ಕೆಲವೇ ದಿನದಲ್ಲಿ ಸಂಪೂರ್ಣ ಒಣಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಸಮಯದಲ್ಲೇ ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಿದೆ! ಅದು ಮಳೆಯ ವಿಚಾರವಾಗಿ.
ಎಲ್ಲೆಲ್ಲಿ ಮಳೆಯ ಅಬ್ಬರ ಶುರು?
ಹವಾಮಾನ ತಜ್ಞರು ನೀಡಿರುವ ಮಾಹಿತಿ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಿಂದ ಮಳೆಯಾಗಲಿದೆ ಅಂತಾಲು ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಭಾರಿ ಮಳೆ ಬಿದ್ದಿದೆ. ಹಾಗೇ ನಿನ್ನೆ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ & ಗಾಳಿ ಬಿದ್ದಿದ್ದು ಸಂತಸ ತಂದಿದೆ. ಈ ನಡುವೆ ದೇಶದ ಇನ್ನೂ ಕೆಲವು ಕಡೆ ಭಾರಿ ಮಳೆ ಶುರುವಾಗಿದೆ.