ಬ್ಯಾಂಕ್‌ಗಳಿಗೆ ಆರ್‌ಬಿಐ ಹೊಸ ಸೂಚನೆ, ಸುಖಾಸುಮ್ಮನೆ ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಗ್ರಾಹಕರಿಗೆ ದಂಡ ವಿಧಿಸುವಂತಿಲ್ಲ
ನವದೆಹಲಿ, ಮಾರ್ಚ್ 31: ಬ್ಯಾಂಕಿನಲ್ಲಿ ಒಂದು ಖಾತೆ ಹೊಂದಬೇಕು ಅನ್ನೋದು ಬಹಳಷ್ಟು ಜನರ ಅವಶ್ಯಕತೆ ಆಗಿರುತ್ತೆ. ಆದ್ರೆ ಬ್ಯಾಂಕ್ ನ ಕೆಲವು ನಿಯಮಗಳು ಕೆಲ ವರ್ಗದ ಜನರಿಗೆ ಕಷ್ಟವಾಗೋದ್ರಿಂದ ಅವರು ಬ್ಯಾಂಕ್ ವ್ಯವಹಾರಗಳಿಂದ ದೂರವೇ ಉಳಿಯುತ್ತಾರೆ.
ಆ ಪೈಕಿ ಅಕೌಂಟ್ ಓಪನ್ ಮಾಡಿದ್ರೆ ಮತ್ತೆ ಖಾತೆಯಲ್ಲಿ ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ ಅಂತ ಮೇಂಟೈನ್ ಮಾಡಲೇಬೇಕು. ಈ ಕಾರಣಕ್ಕೆ ಹಲವರು ಬ್ಯಾಂಕ್ ಖಾತೆಗಳನ್ನೇ ಮಾಡಿಸುವುದಿಲ್ಲ . ಒಂದು ವೇಳೆ ನೀವು ಬ್ಯಾಂಕ್ ಅಕೌಂಟ್ ಮಾಡಿಸಿ ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೈನ್ ಮಾಡಿಲ್ಲ ಅಂದ್ರೆ , ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಇಲ್ಲ ಎಂಬ ಕಾರಣಕ್ಕೆ ನಿಮಗೆ ಫೈನ್ ಕೂಡ ಹಾಕಲಾಗುತ್ತದೆ. ಇದು ಬಹಳಷ್ಟು ಗ್ರಾಹಕರಿಗೆ ಸಮ್ಮತಿ ಇರೋದಿಲ್ಲ.
ಬಹುತೇಕ ಗ್ರಾಹಕರು ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್ ಹೊಂದಿರುತ್ತಾರೆ, ತಮ್ಮ ಸಂಬಳ ಕ್ರೆಡಿಟ್ ಆಗುವ ಸಲುವಾಗಿ ಅಥವಾ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದುಕೊಳ್ಳುವುದಕ್ಕಾಗಿ, ಹೀಗೆ ಸಮಾಜದ ಅನೇಕ ವರ್ಗ ಅವರದ್ದೆಯಾದ ಅವಶ್ಯಕತೆಗಳಿಗೆ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ . ಆದರೆ ಪ್ರತಿಯೊಬ್ಬರಿಗೂ ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ ಅಕೌಂಟ್ ನಲ್ಲಿ ಬಿಡಲೇಬೇಕು ಅನ್ನೋ ನಿಯಮ ಕಷ್ಟಕರವಾಗಿರುತ್ತದೆ. ಇದೀಗ RBI ಈ ನಿಯಮಗಳಿಗೆ ಬದಲಾವಣೆ ತಂದಿದೆ.
ಎರಡು ವರ್ಷಕ್ಕಿಂತ ಹಳೆ ಖಾತೆಗೆ ನಿಯಮ ಅನ್ವಯ ! ಈ ಮೊದಲು ಇದ್ದ ನಿಯಮಗಳನ್ನ ಗಮನಿಸಿದರೆ ಸೇವಿಂಗ್ಸ್ ಅಕೌಂಟ್ ಅಥವಾ ಕರೆಂಟ್ ಅಕೌಂಟಾಗಿರಲಿ , ಆ ಅಕೌಂಟ್ ಗೆ ಅನುಗುಣವಾಗಿ ಮಿನಿಮಮ್ ಬ್ಯಾಲೆನ್ಸ್ ಇಂತಿಷ್ಟು ಅಂತ ಬ್ಯಾಂಕ್ ನಿಗದಿ ಮಾಡ್ತಾ ಇತ್ತು. ಅಷ್ಟು ಮೊತ್ತವನ್ನ ನಾವು ಅಕೌಂಟ್ ನಿಂದ ವಿಥ್ ಡ್ರಾ ಮಾಡದೇ ಮಿನಿಮಮ್ ಬ್ಯಾಲೆನ್ಸ್ ಅಂತ ಅಕೌಂಟ್ ನಲ್ಲಿ ಬಿಡಬೇಕಿತ್ತು . ಒಂದು ವೇಳೆ ಅಕೌಂಟ್ ನಲ್ಲಿ ನಾವು ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಲು ವಿಫಲರಾದರೆ ಅದಕ್ಕೆ ಬ್ಯಾಂಕ್ ಗ್ರಾಹಕರಿಗೆ ದಂಡವನ್ನ ಕೂಡ ವಿಧಿಸುತ್ತಿತ್ತು. ಹೀಗಾಗಿ ಕೆಲವೊಮ್ಮೆ ನೆಗೆಟಿವ್ ಬ್ಯಾಲೆನ್ಸ್ ಕೂಡ ಉಂಟಾಗುತ್ತಿತು. ಆದ್ರೆ ಇನ್ಮುಂದೆ ಬ್ಯಾಂಕ್ ಗಳು ಹಾಗೆ ಮಾಡುವಂತಿಲ್ಲ.
ಒಂದುವೇಳೆ ನೀವು ಎರಡು ಮೂರು ಬ್ಯಾಂಕ್ ಅಕೌಂಟ್ ಹೊಂದಿದ್ದು ಆ ಪೈಕಿ ಯಾವುದೋ ಕಾರಣಕ್ಕೆ ಹಳೆಯ ಅಕೌಂಟ್ ಬಳಸೋದನ್ನ ನಿಲ್ಲಿಸಿರ್ತೀರಾ ! ಆದ್ರೆ ಬ್ಯಾಂಕ್ ಮಾತ್ರ ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಮೇಂಟೈನ್ ಮಾಡಿಲ್ಲ ಅಂಥ ದಂಡ ಹಾಕಿರತ್ತೆ. ಒಂದುವೇಳೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ರೆ ನೀವು ಹಲವಾರು ದಿನಗಳಿಂದ ಯಾವುದೇ ವಹಿವಾಟು ನಡೆಸಿಲ್ಲವಾದ್ರೆ ಅಂಥ ಅಕೌಂಟ್ ಗಳಿಗೆ ಬ್ಯಾಂಕ್ ನಿರ್ವಹಣಾ ಮೊತ್ತ ಹೇರುವಂತಿಲ್ಲ. ಒಂದುವೇಳೆ ನಿಮ್ಮ ಖಾತೆ ೨ ವರ್ಷದಿಂದ ನಿಷ್ಕ್ರಿಯವಾಗಿದ್ರೆ ಅಂಥ ಕಾತೆಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಈ ನಿಯಮ ಏಪ್ರಿಲ್ ೧ ರಿಂದ ಜಾರಿಗೆ ಬರಲಿದೆ , RBI ಈಗಾಗಲೇ ದೇಶಾದ್ಯಂತ ಬ್ಯಾಂಕ್ ಗಳಿಗೆ ಹೊಸ ನಿಯಮ ಪಾಲನೆ ಮಾಡಲು ಸೂಚನೆ ನೀಡಿದೆ.