ಕಡಬದಲ್ಲಿ ತಡರಾತ್ರಿ ಅಕ್ರಮಗೋಸಾಗಾಟ ವಾಹನ ಡಿಕ್ಕಿಯಾಗಿ ವ್ಯಕ್ತಿ ಬಲಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ
ಪುತ್ತೂರು: ದಕ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಸಾಯಿಖಾನೆಗಳು ಕಾರ್ಯಚರಿಸುತ್ತಿದ್ದು, ತಕ್ಷಣಕ್ಕೆ ಅದನ್ನೆಲ್ಲ ಬಂದ್ ಮಾಡಿಸಬೇಕು ಇಲ್ಲದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.
ಕಡಬದಲ್ಲಿ ತಡರಾತ್ರಿ ಅಕ್ರಮ ಗೋಸಾಗಾಟ ಕಾರಿಗೆ ವ್ಯಕ್ತಿ ಬಲಿಯಾದ ಪ್ರಕರಣಕ್ಕೆ ಸಂಬಂದಿಸಿ ಘಟನ ಸ್ಥಳಕ್ಕೆ ತೆರಳಿ ಹಿಂದೂ ಸಂಘಟನೆಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಮಾತನಾಡಿದರು.
ಅಕ್ರಮ ಗೋಸಾಗಾಟ ಹೆಚ್ಚಾಗಿದೆ, ವೇಣೂರು, ಧರ್ಮಸ್ಥಳದಲ್ಲೂ ಗೋ ಸಾಗಾಟ ನಡೆಸಿ ಸಿಕ್ಕಿ ಬಿದ್ದಿದ್ದಾರೆ. ಇಲ್ಲೂ ಘಟನೆಗೆ ಕಾರಣವಾದ ಆರೋಪಿಯನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸಬೇಕು ಮತ್ತು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸ್ಬೇಕು. ಮೃತ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಅಗ್ರಹಿಸಿದ್ರು.