ಐಪಿಎಲ್ 2024ರ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ ನೋಡಿ
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಐಪಿಎಲ್ ಪಂದ್ಯಗಳು ಭಾರತದಿಂದ ಹೊರಗಡೆ ನಡೆಯುತ್ತವೆ ಎನ್ನುವ ಆತಂಕವಿತ್ತು. ಆದರೆ, ಬಿಸಿಸಿಐ ಭಾರತದಲ್ಲೇ ಐಪಿಎಲ್ ಪಂದ್ಯಗಳನ್ನು ನಡೆಸಲು ನಿರ್ಧರಿಸಿದ್ದು, ಎಲ್ಲಾ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೊದಲ ಹಂತದಲ್ಲಿ ಬಿಸಿಸಿಐ ಏಪ್ರಿಲ್ 7ರವರೆಗಿನ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು, ಈಗ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ 8ರಂದು ಸಿಎಸ್‌ಕೆ ತಂಡ ಕೆಕೆಆರ್ ತಂಡದ ವಿರುದ್ಧ ಸೆಣೆಸಲಿದ್ದು ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗದ ಕಾರಣ ಬಿಸಿಸಿಐ ಆರಂಭಿಕ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು. ಬಳಿಕ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 24 ರಿಂದ ಜೂನ್ 4 ರವರೆಗೆ ನಡೆಯಲಿದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ರೂಪಿಸಲಾಗಿದೆ.
ಮೇ 26ರಂದು ಫೈನಲ್
ಮೇ 19ರಂದು ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದ್ದು, ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ
1) ಆರ್‌ಸಿಬಿ Vs ಸಿಎಸ್‌ಕೆ – ಮಾರ್ಚ್ 22 (ಆರ್‌ಸಿಬಿಗೆ ಸೋಲು)
2) ಆರ್‌ಸಿಬಿ Vs ಪಂಜಾಬ್ ಕಿಂಗ್ಸ್ – ಮಾರ್ಚ್ 25, ಬೆಂಗಳೂರು.
3) ಆರ್‌ಸಿಬಿ Vs ಕೋಲ್ಕತ್ತಾ ನೈಟ್ ರೈಡರ್ಸ್ – ಮಾರ್ಚ್ 29, ಬೆಂಗಳೂರು.
4) ಆರ್‌ಸಿಬಿ Vs ಲಕ್ನೊ ಸೂಪರ್ ಜೈಂಟ್ಸ್ – ಏಪ್ರಿಲ್ 2, ಬೆಂಗಳೂರು.
5) ಆರ್‌ಸಿಬಿ Vs ರಾಜಸ್ಥಾನ ರಾಯಲ್ಸ್ – ಏಪ್ರಿಲ್ 6, ಜೈಪುರ.
6) ಆರ್‌ಸಿಬಿ Vs ಮುಂಬೈ ಇಂಡಿಯನ್ಸ್ – ಏಪ್ರಿಲ್ 11, ಮುಂಬೈ.
7) ಆರ್‌ಸಿಬಿ Vs ಸನ್‌ರೈಸರ್ಸ್ ಹೈದರಾಬಾದ್ – ಏಪ್ರಿಲ್ 15, ಬೆಂಗಳೂರು.
8) ಆರ್‌ಸಿಬಿ Vs ಕೋಲ್ಕತ್ತಾ ನೈಟ್ ರೈಡರ್ಸ್ – ಏಪ್ರಿಲ್ 21, ಕೋಲ್ಕತ್ತಾ.
9) ಆರ್‌ಸಿಬಿ Vs ಸನ್‌ರೈಸರ್ಸ್ ಹೈದರಾಬಾದ್ – ಏಪ್ರಿಲ್ 24, ಹೈದರಾಬಾದ್.
10) ಆರ್‌ಸಿಬಿ Vs ಗುಜರಾತ್ ಟೈಟಾನ್ಸ್ – ಏಪ್ರಿಲ್ 28, ಅಹಮದಾಬಾದ್.
11) ಆರ್‌ಸಿಬಿ Vs ಗುಜರಾತ್ ಟೈಟಾನ್ಸ್ – ಮೇ 4, ಬೆಂಗಳೂರು.
12) ಆರ್‌ಸಿಬಿ Vs ಪಂಜಾಬ್ ಕಿಂಗ್ಸ್ – ಮೇ 9, ಧರ್ಮಶಾಲಾ.
13) ಆರ್‌ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್ – ಮೇ 12, ಬೆಂಗಳೂರು.
14) ಆರ್‌ಸಿಬಿ Vs ಚೆನ್ನೈ ಸೂಪರ್ ಕಿಂಗ್ಸ್ – ಮೇ 18, ಬೆಂಗಳೂರು.