ಕೊಕ್ರಾಡಿ ದೈವಸ್ಥಾನ: ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿ ಸಭೆ
ವೇಣೂರು: ಕೊಕ್ರಾಡಿಯ ಹೇರ್ದಂಡಿ ಬ್ಯಾಕ್ಯಾರುವಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೈವಸ್ಥಾನದಲ್ಲಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ ಹಾಗೂ ನೇಮೋತ್ಸವವು ಮಾ. 26ರಿಂದ 29ವರೆಗೆ ಜರಗಲಿದ್ದು, ಈ ಬಗ್ಗೆ ಸಮಿತಿ ಪದಾಧಿಕಾರಿಗಳ ಪೂರ್ವಭಾವಿ ಸಭೆ ಜರಗಿತು.
ಸಭೆಯಲ್ಲಿ ವೇದಿಕೆ, ಆಸನ, ಅಲಂಕಾರ, ಊಟೋಪಚಾರದ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ಲೋಕಸಭಾ ಚುನಾವಣೆಯ ಸಂಬಂಧ ಚುನಾವಣಾ ನೀತಿ ಸಂಹಿತೆ ಪಾಲಿಸಿ ಕಾರ್ಯಕ್ರಮ ನಿರ್ವಹಣೆ ಮಾಡುವ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಡಂಗೆಗುತ್ತು ಕೊಕ್ರಾಡಿ, ಪ್ರ. ಕಾರ್ಯದರ್ಶಿ ಅಜಿತ್ ಕುಮಾರ್ ಹಿರ್ತೊಟ್ಟುಗುತ್ತು ಕೊಕ್ರಾಡಿ, ಕೋಶಾಧಿಕಾರಿ ಸೂರ್ಯನಾರಾಯಣ ಡಿ.ಕೆ., ನ್ಯಾಯವಾದಿ ನವೀನ್ ಶೆಟ್ಟಿ, ರವಿ ಪೂಜಾರಿ ಮಾನ್ಯೋಡಿಗುತ್ತು, ಲಕ್ಷ್ಮಣ ಪೂಜಾರಿ, ಶಿವಪ್ರಕಾಶ್ ಅಂಭಾಶ್ರೀ, ದಯಾನಂದ ಕುಲಾಲ್, ಹರೀಶ್ ಕುಮಾರ್ ಕೊಕ್ರಾಡಿ, ಕೃಷ್ಣಪ್ಪ ಪೂಜಾರಿ ಸಾವ್ಯ, ಹರೀಶ್ ಪೂಜಾರಿ ಬಳ್ಳಿದಡ್ಡ, ವಿಶ್ವನಾಥ ಬಂಗ ಮತ್ತಿತರರು ಇದ್ದರು.