ವಿಜಯಪುರ-ಮಂಗಳೂರು ರೈಲು ವೇಳಾಪಟ್ಟಿ; ಧರ್ಮಸ್ಥಳ ಭಕ್ತರಿಗೆ ಸಿಹಿಸುದ್ದಿ
ವಿಜಯಪುರ, ಮಾರ್ಚ್ 23: ಭಾರತೀಯ ರೈಲ್ವೆ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯದ ಭಕ್ತರಿಗೆ ಸಿಹಿಸುದ್ದಿ ನೀಡಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸುವ ವಿಜಯಪುರ-ಮಂಗಳೂರು ಜಂಕ್ಷನ್ ನಡುವಿನ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ, ವೇಳಾಪಪಟ್ಟಿಯನ್ನು ಬದಲಾವಣೆ ಮಾಡಿದೆ.
ನೈಋತ್ಯ ರೈಲ್ವೆ ಈ ಕುರಿತು ಆದೇಶವನ್ನು ಹೊರಡಿಸಿದೆ. ರೈಲು ನಂಬರ್ 07377 ವಿಜಯಪುರ (ಬಿಜಾಪುರ)-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು 1/4/2024 ರಿಂದ 30/9/2024ರ ತನಕ ವಿಸ್ತರಣೆ ಮಾಡಲಾಗಿದೆ.
ರೈಲು ನಂಬರ್ 07378. ಮಂಗಳೂರು ಜಂಕ್ಷನ್-ವಿಜಯಪುರ (ಬಿಜಾಪುರ) ರೈಲನ್ನು 2/4/2024 ರಿಂದ 1/10/2024ರ ತನಕ ವಿಸ್ತರಣೆ ಮಾಡಲಾಗಿದೆ. ಈಗಿರುವ ನಿಲ್ದಾಣ, ಬೋಗಿಗಳ ಸಂಯೋಜನೆ, ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.