ಅಂಡಿಂಜೆ: ಇಲ್ಲಿಯ ಶ್ರೀ ಕ್ಷೇತ್ರ ಹಂದ್ಲಾಯಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಮಾ. 27ರಂದು ಜರಗಲಿದೆ.
ಅಂದು ಬೆಳಿಗ್ಗೆ ಗಂಟೆ 9ರಿಂದ ದೈವದ ಪ್ರಾರ್ಥನೆ, ಗಣಹೋಮ, ಕೋಳಿಗುಂಟ ಚೆಂಡು, ಸಂಜೆ ದುಗಣಬೆಟ್ಟು ಗುತ್ತುವಿನಿಂದ ಭಂಡಾರ ಇಳಿದು ದೈವಸ್ಥಾನಕ್ಕೆ ಆಗಮಿಸಲಿದೆ. ರಾತ್ರಿ ನವಕ ಕಲಶ ಅಭಿಷೇಕ, ಪರ್ವ ಸಕ್ರಾಂತಿ, ಹೂವಿನಪೂಜೆ ನಡೆಯಲಿದೆ.
ರಾತ್ರಿ 8-30ರಿಂದ ಉಪಹಾರ, 9 ಗಂಟೆಗೆ ದೈವದ ಸೂಟೆದಾರ ರಾತ್ರಿ 10 ರಿಂದ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಬಳಿಕ ರಾತ್ರಿ 3 ಗಂಟೆಯಿಂದ ಕುರುಸಂಬಿಲ ಪರ್ವ ಬಳಿಕ ಶ್ರೀ ದೈವದ ಭಂಡಾರ ನಿರ್ಗಮನ ಆಗಲಿದೆ.