December 23, 2024

ಲೋಕಸಭೆ ಚುನಾವಣೆಗೆ ಭರ್ಜರಿ ಸುದ್ದಿ ಕೊಟ್ಟ ಚುನಾವಣಾ ಆಯೋಗ!

0

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ, ಭಾರತದಲ್ಲಿ ಇದೀಗ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಹಲವು ದಿನಗಳಿಂದ ಇದೇ ದಿನಕ್ಕೆ ಭಾರತೀಯರು ಮಾತ್ರವಲ್ಲ ಇಡೀ ಪ್ರಪಂಚವೇ ಕಾಯುತ್ತಿತ್ತು. ಇಂದು ಭಾರತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವ ಭಾರತೀಯ ಚುನಾವಣಾ ಆಯೋಗ ಮಣಿಪುರ ಸಂತ್ರಸ್ತರಿಗೂ ಸಿಹಿಸುದ್ದಿ ನೀಡಿದೆ!

ಹೌದು, ಭಾರತದ ಲೋಕಸಭೆ ಚುನಾವಣೆಗಾಗಿ ಇಂದು ರಣಕಹಳೆ ಮೊಳಗಿದೆ. ಭಾರತೀಯ ಚುನಾವಣಾ ಆಯೋಗವು, ದಿನಾಂಕ ಘೋಷಣೆ ಮಾಡಿದೆ. 2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ. ಹಾಗೇ ಚುನಾವಣೆ ಫಲಿತಾಂಶ ಜೂನ್ 4ರಂದು ಹೊರಬೀಳಲಿದ್ದು ಭಾರಿ ಕುತೂಹಲಕ್ಕೆ ಮತ್ತಷ್ಟು ಕುತೂಹಲ ಸೇರ್ಪಡೆಯಾಗಿದೆ. ಈ ಸಮಯದಲ್ಲೇ ಭಾರಿ ಹಿಂಸಾಚಾರಕ್ಕೆ ನಲುಗಿ ಹೋಗಿದ್ದ ಮಣಿಪುರದ ಜನರಿಗೂ ಇದೀಗ ಚುನಾವಣಾ ಆಯೋಗ ಭರ್ಜರಿ ಸುದ್ದಿ ನೀಡಿದೆ. ಹಾಗಾದರೆ ಏನದು ಭರ್ಜರಿ ಸುದ್ದಿ? ಆ ಬಗ್ಗೆ ಇಂಚಿಂಚು ಮಾಹಿತಿ ತಿಳಿಯೋಣ ಬನ್ನಿ.

ಮತದಾರರಿಗೆ ಭರ್ಜರಿ ಸುದ್ದಿ!
ಅಷ್ಟಕ್ಕೂ ಹಿಂಚಾರ ಪೀಡಿತ ಮಣಿಪುರದ ನಿರಾಶ್ರಿತರ ಕೇಂದ್ರದಲ್ಲಿ ವಾಸ ಮಾಡುತ್ತಿರುವವರಿಗೆ ಲೋಕಸಭೆ ಚುನಾವಣೆಗೆ ಭರ್ಜರಿ ಸುದ್ದಿ ಸಿಕ್ಕಿದೆ. ಸಂತ್ರಸ್ತ್ರರ ಪರಿಸ್ಥಿತಿಯನ್ನ ಈಗ ಭಾರತದ ಚುನಾವಣಾ ಆಯೋಗದ ಅಧಿಕಾರಿಗಳು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಸಂತ್ರಸ್ತರಿಗಾಗಿ ಹೊಸ ವ್ಯವಸ್ಥೆ ಕಲ್ಪಿಸಿದ್ದಾರೆ. ಇದೀಗ ಮಣಿಪುರ ಹಿಂಸಾಚಾರದಲ್ಲಿ ಸಂತ್ರಸ್ತರಾದ ಜನರಿಗೆ ತಮ್ಮ ತಮ್ಮ ನಿರಾಶ್ರಿತ ಶಿಬಿರದಿಂದಲೇ ವೋಟಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಈ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಚುನಾವಣಾ ಅಧಿಕಾರಿಗಳು.

ಚುನಾವಣೆ ನಡೆಯುವುದು ಯಾವಾಗ?
ಇಂದು ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಸಮಯದಲ್ಲಿ ಈ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರು, ‘ಸಂಸ್ತ್ರಸ್ತರಿಗೆ ನಾವು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ’ ಅಂತಾ ಹೇಳುವ ಮೂಲಕ ಮಣಿಪುರದ ಜನರಿಗೆ ಧೈರ್ಯ ತುಂಬಿದ್ದಾರೆ. ಹೀಗಾಗಿ ನೊಂದ ಜೀವಗಳಿಗೆ ಈಗ ಮತ್ತಷ್ಟು ಆತ್ಮಸ್ತೈರ್ಯ ತುಂಬಿದಂತೆ ಆಗಿದೆ. ಯಾಕಂದ್ರೆ ಈಗಾಗಲೇ ಅಲ್ಲಿ ಜನಗಳು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ನೂರಾರು ಜನರು ಇಲ್ಲಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಹೀಗಾಗಿ ನಿರಾಶ್ರಿತ ಶಿಬಿರದಲ್ಲಿ ಇರುವ ಮಣಿಪುರ ರಾಜ್ಯದ ಮತದಾರರು, ಏಪ್ರಿಲ್ 19 & ಏಪ್ರಿಲ್ 26 ರಂದು 2 ಹಂತದಲ್ಲಿ ವೋಟಿಂಗ್ ಮಾಡಬಹುದು ಅಂತಾ ತಿಳಿಸಲಾಗಿದೆ.

ಕೈಮೀರಿ ಹೋಗಿತ್ತು ಮಣಿಪುರ ಸ್ಥಿತಿ
ಮಣಿಪುರ ರಾಜ್ಯದಲ್ಲಿ ದಿಢೀರ್ ಹೊತ್ತಿಕೊಂಡ ಹಿಂಸಾಚಾರ ಹಲವರ ಜೀವ ಬಲಿಪಡೆದು, ಸಾವಿರಾರು ಜನರನ್ನು ಬೀದಿಗೆ ಬೀಳುವಂತೆ ಮಾಡಿದೆ. ಹೀಗಾಗಿ ಮಣಿಪುರ ಸರ್ಕಾರ ಕೂಡ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಿದ್ದು, ಮನೆಗಳನ್ನ ಕಟ್ಟಿಕೊಟ್ಟಿದೆ. ಹಾಗೇ ಹಿಂಸೆಯಿಂದ ತಮ್ಮ ತಮ್ಮ ಮನೆ & ಕುಟುಂಬ ಕಳೆದುಕೊಂಡ ಜನರಿಗೆ ಇದೀಗ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸಮಯದಲ್ಲೇ ಚುನಾವಣಾ ಆಯೋಗ ಕೂಡ ಹೊಸ ಭರವಸೆ ತುಂಬುವ ಪ್ರಯತ್ನವನ್ನ ಮಾಡಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು