ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾಗಿ ಶೇಖರ್ ಕುಕ್ಕೇಡಿ ನೇಮಕ
ಮಂಗಳೂರು : ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಜಿಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ ನೇಮಕಗೊಂಡಿದ್ದಾರೆ.
ಕೆಪಿಸಿಸಿ ತಾಲೂಕು, ಜಿಲ್ಲಾ ಮಟ್ಟದ ಹಲವು ಹುದ್ದೆಗಳನ್ನು ನಿಭಾಯಿಸಿರುವ ಶೇಖರ ಕುಕ್ಕೇಡಿ ಅವರು ಜಿಪಂ ಅಳದಂಗಡಿ ಕ್ಷೇತ್ರವನ್ನು ಪ್ರತಿನಿಧಿಸಿ ಜಿಪಂ ಸದಸ್ಯ ರಾಗಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇದೀಗ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಐದು ಮಂದಿ ಉಪಾಧ್ಯಕ್ಷರ ಪೈಕಿ ಇವರನ್ನು ನೇಮಕ ಮಾಡಲಾಗಿದೆ.