ಉಳ್ತೂರು: ಬ್ರಹತ್ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ ವಾರ್ಷಿಕ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ
ಕುಕ್ಕೇಡಿ : ಇಲ್ಲಿಯ ಉಳ್ತೂರಿನಲ್ಲಿ ಬ್ರಹತ್ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ ವಾರ್ಷಿಕ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಮಾ . 1 ಮತ್ತು 2 ರಂದು ನಡೆಯಿತು.
ಸೆಯ್ಯಿದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಬ್ಬಾರ್ ಸಖಾಫಿ ಪಾತೂರ್ ಮುಖ್ಯ ಪ್ರಭಾಷಣ ನಡೆಸಿದರು. ಸೆಯ್ಯಿದ್ ತ್ವಾಹ ತಂಙಳ್ ಬುರ್ದಾ ನೇತ್ರೃತ್ವ ವಹಿಸಿದ್ದರು.
ಅಯಾನ್ ಖಾದಿರಿ ಅರಸಿಕೆರೆ, ಅಝ್ ಹರ್ ಕಲ್ಲೂರ್, ಹಾಫಿಳ್ ಅನ್ವರ್ ಸಾದಾತ್, ಅಶ್ರೀಫ್ ಮಳ್ಹರಿ, ಶಾಕಿರ್ ಫಾಳಿಲಿ ಸೇರಿದಂತೆ ಹಲವರು ನಷೀದ ಹಾಗೂ ನಅತೇ ಶರೀಫ್ ಆಲಾಪಿಸಿದರು.
ಕಾರ್ಯಕ್ರಮದಲ್ಲಿ ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ, ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಉಳ್ತೂರು ಸೇರಿದಂತೆ ಊರಿನ ಪರ ಊರಿನ ಸಾದಾತ್ ಗಳು, ಆಲಿಂಗಳು, ಹಿರಿಯರು, ಕಿರಿಯರು ಸೇರಿ ಹಲವರು ಉಪಸ್ಥಿತರಿದ್ದರು.