December 24, 2024

ಫಾಸ್ಟ್ ಫುಡ್ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಅಸುರಕ್ಷಿತ ಹಾಗೂ ಅಪಾಯಕಾರಿ ರಾಸಾಯನಿಕ ಪತ್ತೆ, ನಾಳೆಯಿಂದ ರಾಜ್ಯದಲ್ಲಿ ಗೋಬಿ ಮಂಚೂರಿ ನಿಷೇಧ?

0

 

ಬೆಂಗಳೂರು: ಜನರ ನೆಚ್ಚಿನ ತಿನಿಸುಗಳಲ್ಲಿ ಒಂದಾದ ಗೋಬಿ ಮಂಚೂರಿ ರಾಜ್ಯದಲ್ಲಿ ಶೀಘ್ರದಲ್ಲೇ ನಿಷೇಧವಾಗುವ ಸಾಧ್ಯತೆಯಿದೆ.

ಇತ್ತೀಚೆಗೆ ಪ್ರಯೋ ಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ ನೂರಕ್ಕೂ ಅಧಿಕ ಬಗೆಯ ಗೋಬಿ ಮಂಚೂರಿಗಳಲ್ಲಿ ಅಸುರಕ್ಷಿತ ಹಾಗೂ ಅಪಾಯಕಾರಿ ರಾಸಾಯನಿಕ ಸನ್‌ಸೆಟ್‌ ಎಲ್ಲೋ ಮತ್ತು ಥರ್ಟಜೈನ್‌ ಪತ್ತೆಯಾಗಿದೆ.

ಹೀಗಾಗಿ ರಾಜ್ಯ ಸರಕಾರವು ಅಸುರಕ್ಷಿತ ಗೋಬಿ ಮಂಚೂರಿಗಳನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ (ಬಾಂಬೆ ಮಿಠಾಯಿ)ಯನ್ನೂ ನಿಷೇಧಿಸಲಾಗಿತ್ತು.ಇದರ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತೆ ಇಲಾಖೆಯು ಸಲ್ಲಿಸಿರುವ ವರದಿ ಆಧರಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಸರಕಾರ ಮುಂದಾಗಿದೆ. ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪತ್ರಿಕಾಗೋಷ್ಠಿ ನಡೆಸಿ ಗೋಬಿ ಮಂಚೂರಿ ನಿಷೇಧಿಸುವ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಕೃತಕ ಬಣ್ಣ ಬೆರೆಸಿದ ಗೋಬಿಗೆ ಅವಕಾಶವಿಲ್ಲ?
ಆರೋಗ್ಯ ಇಲಾಖೆಯು ಎಲ್ಲ ಜಿಲ್ಲೆಗಳಿಂದ ಮಾದರಿ ಸಂಗ್ರಹಿಸಿ ಟೆಸ್ಟ್‌ಗೆ ಕಳುಹಿಸಲು ಸೂಚನೆ ನೀಡಿತ್ತು. ನೂರಕ್ಕೂ ಹೆಚ್ಚಿನ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಈ ಎರಡು ರಾಸಾಯನಿಕ ಅಂಶಗಳನ್ನು ಗೋಬಿ ಮಂಚೂರಿಗಳಲ್ಲಿ ಬಳಸದಂತೆ ಸೂಚಿಸುವ ಸಾಧ್ಯತೆ ಇದೆ. ಕೃತಕ ಬಣ್ಣ ಬೆರೆಸುವುದಕ್ಕೂ ಅವಕಾಶವಿರುವುದಿಲ್ಲ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು