ಸುಪ್ರಸಿದ್ದ ಅಲಡೆ ಕ್ಷೇತ್ರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ
ಮರೋಡಿ : ಸುಪ್ರಸಿದ್ದ ಅಲಡೆ ಕ್ಷೇತ್ರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯು ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಬಗ್ಗೆ ವಿವರವಾಗಿ ತಿಳಿಸಿದರು. ಆಮಂತ್ರಣ ಪತ್ರಿಕೆ ಮುದ್ರಣದ ಬಗ್ಗೆ ಚರ್ಚಿಸಲಾಯಿತು. ಅನ್ನದಾನದ ಸೇವಾಕರ್ತರನ್ನು ಸಂಪರ್ಕಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಲಾಯಿತು. ಮುಂದೆ ನಡೆಯುವ ಎಲ್ಲಾ ಕೆಲಸದೊಂದಿಗೆ ಊರವರ ಸಹಕಾರ ಕೋರಿದರು.
ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ್ ಕೋಟ್ಯಾನ್ ಹಾಗೂ ಮೊಕ್ತೇಸರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಯಶೋದರ ಬಂಗೇರ ಸ್ವಾಗತಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತರು, ಗ್ರಾಮಸ್ಥರು ಇದ್ದರು.
ಬ್ರಹ್ಮಕಲಶೋತ್ಸವದ ಸಿದ್ಧತೆಯ ಭಾಗವಾಗಿ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸುತ್ತುಪೌಳಿಯ ದುರಸ್ಥಿ ಕೆಲಸ ಭರದಿಂದ ಸಾಗುತ್ತಿದೆ.
ಬ್ರಹ್ಮಕಲಶೋತ್ಸವ ಅನ್ನದಾನಕ್ಕೆ ದೇಣಿಗೆ ನೀಡುವವರು ಮಾರ್ಚ್ 10ರೊಳಗೆ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಯಶೋಧರ ಬಂಗೇರ (+917090834744), ನವೀನ್ ಕೋಟ್ಯಾನ್ (+919741461784) ಅವರ ಬಳಿ ತಮ್ಮ ಹೆಸರನ್ನು ನೀಡಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.