December 23, 2024

ವೇಣೂರು ಮಹಾಮಸ್ತಕಾಭಿಷೇಕ: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ವೈಭವದ ಪುರಪ್ರವೇಶ

0

ವೇಣೂರು : ನೂತನ ಭಟ್ಟಾರಕರಾಗಿ ದೀಕ್ಷೆ ಪಡೆದ ಬಳಿಕ ಪ್ರಪ್ರಥಮವಾಗಿ ವೇಣೂರು ಪುರಪ್ರವೇಶಗೈದ ಶ್ರವಣಬೆಳಗೊಳದ ಶ್ರೀಗಳನ್ನು ವೇಣೂರು ಮಹಾಮಸ್ತಕಾಭಿಷೇಕಕ್ಕೆ ವೈಭವದಿಂದ ಸ್ವಾಗತಿಸಲಾಯಿತು.

ವೇಣೂರಿನ ಕಲ್ಲುಬಸ್ತಿ ಬಳಿಯಿಂದ ಸಂಪ್ರದಾಯ ಪ್ರಕಾರ ಪೂರ್ಣಕುಂಭಪೂರ್ವಕ ಸ್ವಾಗತಿಸಿ, ಬಳಿಕ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆಯೊಂದಿಗೆ ಬಾಹುಬಲಿ ಬೆಟ್ಟಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭ ಮಹಾಮಸ್ತಕಾಭಿಷೇಕ ಸಮಿತಿಯ ಪದಾಧಿಕಾರಿಗಳು, ಸ್ಥಾಪಕ ವಂಶಸ್ಥ ತಿಮ್ಮಣ್ಣಾಜಿಲರಾದ ಡಾ| ಪದ್ಮಪ್ರಸಾದ ಅಜಿಲ, ಬಾಹುಬಲಿ ಯುವಜನಸಂಘದ ಸದಸ್ಯರು, ಬ್ರಾಹ್ಮೀ ಮಹಿಳಾ ಸಂಘದ ಸದಸ್ಯರು ಜೈನ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು