ಆರಂಬೋಡಿ: ಮಾ. 16ರಂದು ನಡೆಯಲಿರುವ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಹೊಕ್ಕಾಡಿಗೋಳಿಯ ಕೊಡಂಗೆಯಲ್ಲಿ ನೂತನ ಕರೆ ನಿರ್ಮಾಣದ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ.
194 ಕೋಲು ಇದ್ದ ಇರುವ ಈ ಕರೆ ದ.ಕ. ಜಿಲ್ಲೆಯಲ್ಲೇ ಅತೀ ಉದ್ದದ ಕರೆ ಎಂದು ಗುರುತಿಸಲಾಗಿದೆ.
ಸಂದೀಪ್ ಶೆಟ್ಟಿ ಪೊಡುಂಬ ಅವರ ಅಧ್ಯಕ್ಷತೆಯಲ್ಲಿ ಈ ಕಂಬಳೋತ್ಸವ ಜರಗಲಿದ್ದು, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ಬೆಳ್ತಂಗಡಿ ಭೂ ನ್ಯಾಯ ಮಂಡಳಿ ಸದಸ್ಯರಾದ ಇಸ್ಮಾಯಿಲ್ ಕೆ. ಪೆರಿಂಜೆ ನೂತನ ಕಂಬಳ ಕ್ರೀಡಾಂಗಣಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ, ಉಮೇಶ್ ಕೊನೆರೊಟ್ಟು, ಲೋಕನಾಥ ಶೆಟ್ಟಿ ಪಮುಂಜ, ಆದೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಮತ್ತಿತರರು ಇದ್ದರು.