ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಸಿಹಿಸುದ್ದಿ: ಆದ್ರೆ, ತಡ ಮಾಡದೇ ಈ ಕೆಲಸ ಮಾಡಿ!
ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇದೀಗ ಸಿಹಿಸುದ್ದಿ ನೀಡಿದೆ. ಸಂಸ್ಥೆಯು ಫಾಸ್ಟ್‌ಟ್ಯಾಗ್ (FASTag) KYC ಅಪ್‌ಡೇಟ್‌ಗೆ ನೀಡಿದ್ದ, 31 ಜನವರಿ 2024 ಡೆಡ್‌ಲೈನ್ ಅನ್ನು ಈಗ ಫೆಬ್ರವರಿ 29, 2024 ರ ವರೆಗೆ ವಿಸ್ತರಿಸಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಗಡುವನ್ನು ವಿಸ್ತರಿಸಿದ್ದು, ಈ ಮೂಲಕ ಬಳಕೆದಾರರಿಗೆ ಕೆವೈಸಿ ಅಪ್‌ಡೇಟ್ ಮಾಡಲು ಮತ್ತಷ್ಟು ಕಾಲಾವಕಾಶ ನೀಡಿದೆ. ಇನ್ನು ಬಳಕೆದಾರರು ಆನ್‌ಲೈನ್ ಮೂಲಕ ಸುಲಭವಾಗಿ ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್ ಮಾಡಬಹುದಾಗಿದೆ.
ಫಾಸ್ಟ್‌ಟ್ಯಾಗ್ KYC ಅಪ್‌ಡೇಟ್‌ಗೆ ಈ ದಾಖಲೆಗಳು ಅಗತ್ಯ
* ವಾಹನ ನೋಂದಣಿ ಪ್ರಮಾಣಪತ್ರ (RC ಕಾರ್ಡ್) ದಾಖಲೆ
* ಗುರುತಿನ ಪುರಾವೆಯ (ಐಡೆಟಿಂಟಿ ಪ್ರೂಫ್) ದಾಖಲೆ
* ವಿಳಾಸ ಪುರಾವೆ ದಾಖಲೆ
* ಪಾಸ್‌ಪೋರ್ಟ್ ಸೈಜ್ ಫೋಟೋ ಬೇಕು
ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ
ಫಾಸ್ಟ್‌ಟ್ಯಾಗ್ ಬಳಕೆದಾರರು ಆನ್‌ಲೈನ್ ಮೂಲಕ ಅವರ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿನೆ ಮಾಡಲು ಅವಕಾಶ ಇದೆ. ಇನ್ನು ಬಳಕೆದಾರರು ಬ್ಯಾಂಕ್ ಪೋರ್ಟಲ್‌ಗಳು, ಮೊಬೈಲ್ UPI ಆಪ್‌ಗಳ ಮೂಲಕ ಅಲ್ಲದೇ ಅಧಿಕೃತ NHAI ಆಪ್ ಮೂಲಕ ಕೂಡಾ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್ ಅನ್ನು ತಿಳಿಯಬಹುದಾಗಿದೆ.