ಐತಿಹಾಸಿಕ ವೇಣೂರು ಮಹಾಮಸ್ತಕಾಭಿಷೇಕ ಸಂಭ್ರಮಕ್ಕೆ ದಿನಗಣನೆ ಪೂರ್ಣಗೊಂಡ ಅಟ್ಟಲಿಗೆ ನಿರ್ಮಾಣ ಕಾರ್ಯ
ವೇಣೂರು : ರಾಜ್ಯದ ಇತಿಹಾಸ ಪ್ರಸಿದ್ಧ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಫೆಬ್ರುವರಿ 24 ರಿಂದ ಮಾರ್ಚ್ ಒಂದರವರೆಗೆ ನಡೆಯಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.
ಇದೀಗ ಶ್ರೀ ಬಾಹುಬಲಿ ಮೂರ್ತಿಯ ಅಟಲ್ಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಫಲ್ಗುಣಿ ನದಿಯ ತಟದಲ್ಲಿ ಪ್ರಸನ್ನಚಿತ್ತನಾಗಿ ನಿಂತಿರುವ ಭಗವಾನ್ ಬಾಹುಬಲಿಗೆ 12 ವರ್ಷಗಳ ಬಳಿಕ ನಡೆಯಲಿರುವ ಮಹಾಮಸ್ತಕಾಭಿಷೇಕದ ಈ ಮಹಾ ಧಾರ್ಮಿಕ ಕಾರ್ಯಕ್ರಮದಲ್ಲಿ ಮುನಿವರ್ಯರು, ಸ್ವಾಮೀಜಿಗಳು, ವಿವಿಧ ಕ್ಷೇತ್ರದ ರಾಷ್ಟೀಯ ದಿಗ್ಗಜರು, ರಾಜಕೀಯ ನಾಯಕರು ಸೇರಿದಂತೆ ರಾಜ್ಯದ ವಿವಿದೆಡೆಯಿಂದ
ಸಹಸ್ರಾರು ಮಂದಿ ಜನ ಆಗಮಿಸುವವರಿದ್ದಾರೆ.