ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 14 ವರ್ಷ ಜೈಲು ಶಿಕ್ಷೆ ಇಲ್ಲಿ ಮಾಜಿ ಪ್ರಧಾನಿಗಳು ಜೈಲಿಗೆ ಹೋಗೋದು ಪ್ಯಾಷನ್?!
ಇಲ್ಲೊಂದು ದೇಶ ಇದೆ ಈ ದೇಶದಲ್ಲಿ ಮಾಜಿ ಪ್ರಧಾನಿಗಳು ಜೈಲಿಗೆ ಹೋಗೋದು ಒಂದು ರೀತಿ ಪ್ಯಾಷನ್ ಆಗಿದೆ. ಅದರಲ್ಲೂ ಭಾರತದ ಆಜನ್ಮ ವೈರಿ ಆಗಿರುವ ಈ ದೇಶದಲ್ಲಿ ಈಗ ಅರಾಜಕತೆ ಕುಣಿಯುತ್ತಿದೆ. ಅದು ಯಾವುದೋ ದೇಶ ಅಲ್ಲ ಭಾರತದ ಪಕ್ಕದಲ್ಲೇ ಮುಳ್ಳಿನ ರೀತಿ ಹುಟ್ಟಿಕೊಂಡ ಪಾಪಿ ಪಾಕಿಸ್ತಾನ!
ಹೌದು, ತೋಷಖಾನಾ ಭ್ರಷ್ಟಾಚಾರ ಕೇಸ್ ಸಂಬಂಧ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗು ಅವರ ಹೆಂಡತಿ ಬುಶ್ರಾ ಬೀಬಿ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿದೆ. ಈ ಹಿಂದೆ ಕೂಡ ಪಾಕಿಸ್ತಾನದ ಸೂಕ್ಷ್ಮ ಮಾಹಿತಿಗಳ ಸೋರಿಕೆ ಕೇಸ್ ಸಂಬಂಧ ಇಮ್ರಾನ್ ಮತ್ತು ಇತರರಿಗೆ 10 ವರ್ಷ ಜೈಲು ಶಿಕ್ಷೆಯಾಗಿತ್ತು. ಈ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಮತ್ತೊಮ್ಮೆ ಈ ಮಾಜಿ ಪ್ರಧಾನಿಗೆ ಶಾಕ್ ಸಿಕ್ಕಿದೆ. ಈ ಮೂಲಕ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಮ್ರಾನ್ ಖಾನ್ ಕನಸು ಪೀಸ್ ಪೀಸ್ ಆಗಿದೆ.
ಬೇಕು ಬೇಕು ಅಂತಲೇ ಟಾರ್ಗೆಟ್?
ಪಾಕಿಸ್ತಾನ ಮಾಜಿ ಪ್ರಧಾನಿಯನ್ನ ಅಕ್ಷರಶಃ ಕ್ರಿಮಿನಲ್ ರೀತಿ ನಡೆಸಿಕೊಳ್ಳಲಾಗ್ತಿದೆ. ಹೀಗಾಗಿಯೆ ಇಮ್ರಾನ್ ಖಾನ್ ವಿರುದ್ಧ ಹತ್ತಾರು ಕೇಸ್ ಹಾಕಿ, ಹೇಗಾದರೂ ಮುಗಿಸಬೇಕು ಅಂತಾ ಪ್ರಯತ್ನ ಮಾಡ್ತಿದ್ದಾರೆ ಎಂಬ ಆರೋಪ ಇಮ್ರಾನ್ ಅವರ ಬೆಂಬಲಿಗರದ್ದು. ಹೀಗಾಗಿಯೇ, ಇಮ್ರಾನ್ ವಿರುದ್ಧ ಕೊಲೆ ಆರೋಪದ ಕೇಸ್‌ಗಳೂ ಬಿದ್ದಿವೆ ಅನ್ನೋ ಆರೋಪ ಇಮ್ರಾನ್ ಬೆಂಬಲಿಗರದ್ದು. ಇಷ್ಟೆಲ್ಲದರ ನಡುವೆ ಇದೀಗ, ಭಾರಿ ದೊಡ್ಡ ಪ್ರಮಾಣದ ಜೈಲು ಶಿಕ್ಷೆ ಕೂಡ ಇಮ್ರಾನ್‌ಗೆ ಮುಳುವಾಗಿದೆ.