ಗ್ರೇನೆಟ್ ಮಾದರಿಯಲ್ಲಿ ಸ್ಪೋಟಕ ತಯಾರಿಕೆಯ ಶಂಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ NIA ಗೆ ವಹಿಸಿಕೊಡಲು ಹಿಂಜಾವೇ ಅಗ್ರಹ
ವೇಣೂರು : ಜನವರಿ 28ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಗೋಳಿಯಂಗಡಿ ಬಳಿ ನಡೆದ ಭೀಕರ ಸ್ಫೋಟ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆ (NIA) ಗೆ ವಹಿಸಿಕೊಡುವಂತೆ ವೇಣೂರು ತಾಲೂಕು ಹಿಂದೂ ಜಾಗರಣ ವೇದಿಕೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಈ ಬಗ್ಗೆ ಇಂದು ವೇಣೂರು ಪೊಲೀಸರಿಗೆ ಮನವಿ ನೀಡಿರುವ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಗೋಳಿಅಂಗಡಿ ಸನಿಹ ಬಶೀರ್ ಎಂಬವರ ಜಮೀನು ಮತ್ತು ಆತ ಹೊಂದಿರುವ ಲೈಸೆನ್ಸ್ ದಾಸ್ತಾನು ಕೇಂದ್ರದಲ್ಲಿ ಸ್ಪೋಟ ನಡೆಯದೆ ಕಾನೂನು ಚೌಕಟ್ಟಿನಲ್ಲಿ ಇರದ ಕಟ್ಟಡದಲ್ಲಿ ನಡೆದಿದ್ದು ಸಾರ್ವಜನಿಕವಾಗಿ ಅನುಮಾನ ಕಾಡುತ್ತಿದೆ. ಸ್ಪೋಟದ ತೀವ್ರತೆ ಎಷ್ಟಿತ್ತು ಎಂದರೆ ಕಾರ್ಮಿಕರ ದೇಹಗಳು ಚಿದ್ರ-ಚಿದ್ರವಾಗಿದೆ, ಕಟ್ಟಡ ಮಾತ್ರವಲ್ಲದೆ ಕಾಂಪೌಂಡ್ ಕೂಡ ಜರಿದು ಬಿದ್ದಿದ್ದು ಸುಮಾರು 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಪನಗೊಂಡಿದೆ.
ಸುತ್ತಲಿನ 15ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟು ಹಾನಿಗೊಳಗಾಗಿವೆ, ಶಬ್ದ ಸರಿಸುಮಾರು 10 ಕಿ.ಮೀ ವ್ಯಾಪ್ತಿವರೆಗೆ ಕೇಳಿರುತ್ತದೆ. ಇದು ಪಟಾಕಿಯಿಂದ ನಡೆದಿರುವ ಘಟನೆಯೇ ಅಲ್ಲ, ಸ್ಪೋಟದ ತೀವ್ರತೆ ಕಂಡಾಗ ಇದು ಗ್ರಾನೈಟ್ ಮಾದರಿಯ ಸ್ಫೋಟಕ ಇಲ್ಲಿ ತಯಾರಾಗುತ್ತಿರುವ ಅನುಮಾನ ಕಾಡುತ್ತಿದೆ ಎಂದು ಪೊಲೀಸರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.