ಮೂವರನ್ನು ಬಲಿ ಪಡೆದ ಕುಕ್ಕೇಡಿ ಸ್ಫೋಟ ಪ್ರಕರಣ ಸ್ಫೋಟದ ತೀವ್ರತೆಗೆ ಪರಿಸರದ ಐದಾರು ಮನೆಗಳು ಜಖಂ! ಸೈಯ್ಯದ್ ಬಶೀರ್ ನ ಪಟಾಕಿ ತಯಾರಕಾ ಘಟಕದಲ್ಲಿ ತಯಾರಾಗುತ್ತಿದ್ದದ್ದು ಏನು?
ಮಂಗಳೂರು : ಬೆಳ್ತಂಗಡಿ ತಾಲ್ಲೂಕು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಎಂಬಲ್ಲಿ, ಪರವಾಣಿಗೆ ಹೊಂದಿ ಪಟಾಕಿ ತಯಾರಿಸುತ್ತಿದ್ದ, ಸೈಯ್ಯದ್ ಬಶೀರ್ ಎಂಬವರ ಪಟಾಕಿ ತಯಾರಕಾ ಘಟಕದಲ್ಲಿ, ಈ ದಿನ ದಿನಾಂಕ 28.01.2024 ರಂದು ಸಂಜೆ ಸಮಯ ಆಕಸ್ಮಿಕವಾಗಿ ಸ್ಪೋಟ ಸಂಭವಿಸಿರುತ್ತದೆ. ಸದ್ರಿ ಅವಘಡದಲ್ಲಿ ಪಟಾಕಿ ತಯಾರಕಾ ಘಟಕದಲ್ಲಿದ್ದ 3 ಜನರು ಮೃತಪಟ್ಟಿರುವ ಸಾಧ್ಯತೆಯಿದ್ದು, ಉಳಿದಂತೆ ಯಾರಿಗೂ ಹಾನಿಯಾಗಿರುವುದಿಲ್ಲ. ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಅಮಿತ್ ಸಿಂಗ್ ಐ.ಪಿ.ಎಸ್ ರವರು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ ರಿಷ್ಯಂತ್ ಐ.ಪಿ.ಎಸ್ ರವರು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ತನಿಖೆಯ ಹೆಚ್ಚಿನ ಮಾಹಿತಿಯನ್ನು ಮುಂದಕ್ಕೆ ನೀಡಲಾಗುವುದು ಎಂದಿದ್ದಾರೆ.