ಏಪ್ರಿಲ್ 16ರಂದು ಲೋಕಸಭಾ ಚುನಾವಣೆ ವದಂತಿ ಚುನಾವಣಾಧಿಕಾರಿ ಸಿಇಒ ಕಚೇರಿ ನೀಡಿದ ಸ್ಪಷ್ಟನೆ ಏನು?
2024ರ ಲೋಕಸಭೆ ಚುನಾವಣೆಯು ಏಪ್ರಿಲ್ 16ರಂದು ನಡೆಯಲಿದೆ ಎನ್ನುವ ವದಂತಿಗಳ ಬಗ್ಗೆ ಚುನಾವಣಾಧಿಕಾರಿ ಸಿಇಒ ಕಚೇರಿ ಸ್ಪಷ್ಟನೆ ನೀಡಿದೆ. ಇದು ತಾತ್ಕಾಲಿಕ ದಿನಾಂಕ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲಾಗಿದೆ.
ಉಲ್ಲೇಖದ ಉದ್ದೇಶಕ್ಕಾಗಿ ಮತ್ತು ಚುನಾವಣಾ ಪ್ಲಾನರ್‌ನಲ್ಲಿ ಪ್ರಾರಂಭ ಮತ್ತು ಅಂತಿಮ ದಿನಾಂಕಗಳನ್ನು ಲೆಕ್ಕಹಾಕಲು ಏಪ್ರಿಲ್ 16, 2024 ಎಂದು ಚುನಾವಣಾ ದಿನವನ್ನು ನೀಡಿದೆ.” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ
ಲೋಕಸಭಾ ಚುನಾವಣಾ ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಭಾರತವು ಕೆಲವು ಹಂತಗಳಲ್ಲಿ ಏಪ್ರಿಲ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಮತ್ತು ಮೇ ತಿಂಗಳಲ್ಲಿ ಫಲಿತಾಂಶ ಬರಲಿದೆ ಎನ್ನಲಾಗಿದೆ. 2019 ರ ಚುನಾವಣೆಯು ಏಳು ಹಂತಗಳಲ್ಲಿ ನಡೆದಿತ್ತು. ಏಪ್ರಿಲ್ 11 ರಿಂದ ಪ್ರಾರಂಭವಾಗಿ ಮೇ 19 ಕ್ಕೆ ಕೊನೆಗೊಂಡಿತು, ಫಲಿತಾಂಶವು ಮೇ 23 ರಂದು ಪ್ರಕಟವಾಯಿತು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿತ್ತು. 303 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಇನ್ನೂ ಅಧಿಕ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಪ್ರತಿಪಕ್ಷ ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಗೆದ್ದು ಎರಡನೇ ಬಾರಿಗೆ ಸೋತಿದೆ.