ಏಕಕಾಲದಲ್ಲಿ ಅಬ್ಬರಿಸಲಿದೆ 18 ಗುಳಿಗ ದೈವಗಳು! ಫೆ. 4ರಂದು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದೆ ಬೆಳ್ತಂಗಡಿಯ ಬರ್ಕಜೆ ಕ್ಷೇತ್ರ
ಮಂಗಳೂರು : ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹದ ನಿಟ್ಟಡೆ ಗ್ರಾಮದ ಬರ್ಕಜೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ- ನವಗುಳಿಗ ಕ್ಷೇತ್ರವು ರಾಜ್ಯದಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದೆ.
ಹೌದು, ಫೆ. 1ರಿಂದ 5ರ ವರೆಗೆ ಜರಗಲಿರುವ ಬರ್ಕಜೆ ಕ್ಷೇತ್ರದ ವಾರ್ಷಿಕ ಜಾತ್ರೊತ್ಸವದಲ್ಲಿ ಫೆ. 4ರಂದು ರಾತ್ರಿ ಕ್ಷೇತ್ರದ ಪರಿವಾರ ದೈವಗಳ ಗಗ್ಗರ ಸೇವೆಯ ಜೊತೆ 18 ಗುಳಿಗಗಳಿಗೂ ನರ್ತನ ಸೇವೆ ಜರಗಲಿದೆ ಎಂದು ಕ್ಷೇತ್ರ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ವಿಶೇಷವಾಗಿ ಇಲ್ಲಿ ಏಕಕಾಲದಲ್ಲಿ 9 ನವಗುಳಿಗಗಳ ನರ್ತನ ಸೇವೆ ಜರಗುತ್ತಿದ್ದು, ಊರಿನ ಹಾಗೂ ದೂರಾದೂರಿನ ಭಕ್ತರು ಆಗಮಿಸಿ ದೈವಗಳ ನರ್ತನ ಸೇವೆಯನ್ನು ಕಂಡು ಪುನೀತಾರಾಗುತ್ತಿದರು. ಅದ್ರಲ್ಲೂ ಈ ಬಾರಿ 18 ಗುಳಿಗಗಳು ಏಕಕಾಲದಲ್ಲಿ ಅಬ್ಬರಿಸಲು ಇರುವುದು ಭಕ್ತ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ.