ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ, ದಿನಾಂಕ, ಸಮಯ ತಿಳಿಯಿರಿ
ಬೆಂಗಳೂರು, ಜನವರಿ 17: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.
2024ರ ಮಾರ್ಚ 1ರಿಂದ ಮಾರ್ಚ್ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಮಂಡಳಿಯು ಮಾಹಿತಿ ನೀಡಿದೆ. ಮಾರ್ಚ್ 25ರಿಂದ ಏಪ್ರಿಲ್ 3ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿ ಬುಧವಾರ ಪ್ರಕಟಿಸಿದೆ.
PUC ಪರೀಕ್ಷೆ ವೇಳಾಪಟ್ಟಿ, ದಿನಾಂಕದ ವಿವರ
* 01-03-2024 – ಕನ್ನಡ ಹಾಗೂ ಅರೇಬಿಕ್
* 04-03-2024 – ಗಣಿತ
* 05-03-2024 – ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
* 06-03-2024 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್
* 07-03-2024 – ಇತಿಹಾಸ ಹಾಗೂ ಭೌತಶಾಸ್ತ್ರ
* 09-03-2024 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
* 11-03-2024 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
* 13-03-2024 – ಇಂಗ್ಲಿಷ್
* 15-03-2024 -ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
* 16-03-2024 – ಅರ್ಥಶಾಸ್ತ್ರ
* 18-03-2024 – ಭೂಗೋಳ ಶಾಸ್ತ್ರ, ಜೀವಶಾಸ್ತ್ರ
* 20-03-2024 – ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
* 22-03-2024 – ಹಿಂದಿ
SSLC ಪರೀಕ್ಷಾ ವೇಳಾಪಟ್ಟಿ, ದಿನಾಂಕ
* 25-03-2024 – ರಂದು ಪ್ರಥಮ ಭಾಷೆ ಕನ್ನಡ,ಇಂಗ್ಲಿಷ್, ಹಿಂದಿ, ಮರಾಠಿ,ತಮಿಳು, ಉರ್ದು,ಸಂಸ್ಕೃತ
* 27-03-2024 – ರಂದು ಸಮಾಜ ವಿಜ್ಞಾನ
* 30-03-2024 – ರಂದು ವಿಜ್ಞಾನ, ರಾಜ್ಯ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
* 02-04-2024 – ರಂದು ಗಣಿತ,ಸಮಾಜ ಶಾಸ್ತ್ರ
* 03-04-2024 – ರಂದು ಅರ್ಥಶಾಸ್ತ್ರ
* 04-04-2024 – ತೃತೀಯ ಭಾಷೆ ಕನ್ನಡ,ಇಂಗ್ಲಿಷ್, ಹಿಂದಿ, ಉರ್ದು,ಸಂಸ್ಕೃತ, ಪರ್ಶಿಯನ್, ತುಳು
* 06-04-2024 – ದ್ವೀತಿಯ ಭಾಷೆ ಇಂಗ್ಲಿಷ್, ಕನ್ನಡ
ಹೆಚ್ಚಿನ ಮಾಹಿತಿಗೆ 10 ನೇ ತರಗತಿ ವಿದ್ಯಾರ್ಥಿಗಳು ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳುಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.