December 24, 2024

ಗುಂಡೂರಿ ಗ್ರಾಮಸ್ಥರಿಗೆ ಗುಡ್ ನ್ಯೂಸ್! ತೆರಿಗೆ ಪಾವತಿಗೆ ಗುಂಡೂರಿ ಹಾಲು ಉತ್ಪಾದಕರ ಸಂಘದಲ್ಲಿ ನಾಳೆ (ಜ. 12) ಅವಕಾಶ

0

 

ಆರಂಬೋಡಿ : ತೆರಿಗೆ ಪಾವತಿಗೆ ಪಂಚಾಯತ್ ಗೆ ತೆರಳಲು ಸಮಯದ ಅಭಾವ ಇರುವ ಗ್ರಾಮಸ್ಥರಿಗೆ ಗುಡ್ ನ್ಯೂಸ್ ವೊಂದಿದೆ.

ನಾಳೆ (ಜ. 12) ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಪರಾಹ್ನ 3.00 ಗಂಟೆಗೆ ಗ್ರಾಮಪಂಚಾಯತ್ ವತಿಯಿಂದ 2023- 24 ನೇ ಸಾಲಿನ ಮನೆತೆರಿಗೆ ಹಾಗೂ ಇತರ ತೆರಿಗೆಗಳ ವಸೂಲಿ ಅಭಿಯಾನ ನಡೆಸಲಾಗುವುದು . ಆದುದರಿಂದ ಎಲ್ಲ ಗ್ರಾಮಸ್ಥರು ತಮ್ಮ ಮನೆಯ ತೆರಿಗೆಯನ್ನು ಪಾವತಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಸಹಕರಿಸಬೇಕಾಗಿ ಪಂಚಾಯತ್ ವಿನಂತಿಸಿಕೊಂಡಿದೆ.

ಇದೀಗ P2 ತಂತ್ರಾಂಶ ದಿಂದ ರಶೀದಿ ಬರುವುದರಿಂದ ಕೈ ಬರಹದ ರಶೀದಿ ನೀಡಲಾಗುವುದಿಲ್ಲ. ಈ ಬಗ್ಗೆ ಕಂಪ್ಯೂಟರ್ ಪ್ರಿಂಟರ್ ಅಳವಡಿಸಿ ತೆರಿಗೆ ವಸೂಲಿ ಮಾಡಿ ರಶೀದಿ ನೀಡಬೇಕಾಗಿದೆ. ಆದುದರಿಂದ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಬಂದು ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ತೆರಿಗೆಯನ್ನು ಪಾವತಿಸಿ ಅದು ಪ್ರಕಟಣೆಯಲ್ಲಿ ಕೋರಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು