ಹೊಕ್ಕಾಡಿಗೋಳಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ
ಆರಂಬೋಡಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಗುರುವಾಯನಕೆರೆ, ಹೊಸಂಗಡಿ ವಲಯ, ಹೊಕ್ಕಾಡಿಗೋಳಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹನ್ನೆರಡುಕವಲಿನ ಗಣೇಶ ಸಭಾಭವನದಲ್ಲಿ ನೆರವೇರಿತು.
ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಪೂಂಜಾದ ಅರ್ಚಕರು ಆಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಹೊಕ್ಕಾಡಿಗೋಳಿ ಒಕ್ಕೂಟದ ಅಧ್ಯಕ್ಷರು, ಹೊಸಂಗಡಿ ವಲಯದ ವಲಯಾಧ್ಯಕ್ಷರೂ ಆದ ಸತೀಶ್ ಪಿ. ಸಮಾರಂಭದ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲೆಕ್ಕ ಪರಿಶೋಧಕರಾದ ಶೇಖರ್ , ಮೇಲ್ವಿಚಾರಕರಾದ ವೀಣಾ ಕುಮಾರಿ, ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಮಂಜಿಲ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ರಾಮ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಮಮತಾ ಸ್ವಾಗತಿಸಿ, ಹೊಕ್ಕಾಡಿಗೋಳಿ ಒಕ್ಕೂಟದ ಕಾರ್ಯದರ್ಶಿ ಜಯಶೀಲ ವರದಿ ಮಂಡಿಸಿ, ಧನ್ಯವಾದಗೈದರು. ಶಿಕ್ಷಕ ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
ನೂತನ ಪದಾಧಿಕಾರಿಗಳು
ಒಕ್ಕೂಟದ ನೂತನ ಅಧ್ಯಕ್ಷರಾಗಿ ಹರೀಶ್ ಆಚಾರ್ಯ, ಉಪಾಧ್ಯಕ್ಷರಾಗಿ ಉಮೇಶ್ ಪೂಜಾರಿ, ಕಾರ್ಯದರ್ಶಿಯಾಗಿ ಗೀತಾ, ಜೊತೆ ಕಾರ್ಯದರ್ಶಿಯಾಗಿ ಸುರೇಖಾ, ಕೋಶಾಧಿಕಾರಿಯಾಗಿ ನಾರಾಯಣ ಪೂಜಾರಿ ಆಯ್ಕೆಯಾದರು.