ವೇಣೂರು: ಇಲ್ಲಿಯ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಹತ್ತನೇ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಮಾತಾ-ಪಿತಾ ಗುರು ದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮವು ಜ. 6ರಂದು ಅಪರಾಹ್ನ 2-30 ರಿಂದ 6-00ರವರೆಗೆ ಜರಗಲಿದೆ.
ಅಪರಾಹ್ನ 3-30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಲೆಯ ಇಂಟರ್‌ಲಾಕ್ ಕಾಮಗಾರಿಯನ್ನು ಶಾಸಕ ಹರೀಶ್ ಪೂಂಜ ಹಾಗೂ ನೂತನ ಕೊಠಡಿಯನ್ನು ದಿನೇಶ್ ದಾಮೋದರ ಗೋಖಲೆ ಉದ್ಘಾಟಿಸಲಿದ್ದಾರೆ. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಗಿರೀಶ್ ಕೆ.ಎಚ್. ವಹಿಸಲಿದ್ದು, ಹಲವು ಅತಿಥಿ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.