ವೇಣೂರು ಮಹಾವೀರ ನಗರದ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ಅನುಷಾ’ಸ್ ಬ್ಯೂಟಿ ಸೆಲೂನ್ ಉದ್ಘಾಟನೆ
ವೇಣೂರು: ಇಲ್ಲಿಯ ಮಹಾವೀರ ನಗರದ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ನವೀಕೃತಗೊಳಿಸಿದ ಅನುಷಾಸ್ ಬ್ಯೂಟಿ ಸೆಲೂನ್‌ನ ಶುಭಾರಂಭವು ಡಿ. 30ರಂದು ಜರಗಿತು.
ಮಂಗಳೂರು ಸಹನಾ ಮೇಕಪ್ ಸ್ಟುಡಿಯೋ ತರಬೇತಿ ಕೇಂದ್ರದ ವ್ಯವಸ್ಥಾಪಕಿ ಸಹನಾ ವೇಣೂರು ಅವರು ನವೀಕೃತ ಬ್ಯೂಟಿ ಸೆಲೂನನ್ನು ಉದ್ಘಾಟನೆಗೊಳಿಸಿ ಶುಭ ಹಾರೈಸಿದರು.
ವಿಶೇಷವಾಗಿ ಮಾದವ ಕಾರಂತ ಅವರ ನೇತೃತ್ವದಲ್ಲಿ ಭಗವದ್ಗೀತಾ ಪಾರಾಯಣ ಜರಗಿತು. ಉದ್ಘಾಟನೆ ವೇಳೆ ಪ್ರಮುಖರಾದ ಉದ್ಯಮಿ ಜಗದೀಶ್ಚಂದ್ರ ಡಿ.ಕೆ., ನಿವೃತ್ತ ಮುಖ್ಯ ಶಿಕ್ಷಕಿ ಶಶಿಪ್ರಭಾ ಡಿ.ಕೆ., ಪ್ರತಿಭಾ ಸುಧೀರ್ ಸೇರಿದಂತೆ ವೇಣೂರಿನ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಹಿತೈಷಿಗಳು ಆಗಮಿಸಿ ಶುಭ ಕೋರಿದರು. ಸಂಸ್ಥೆಯ ಮಾಲಕಿ ಅನುಷಾ ದಯಾನಂದ ಭಂಡಾರಿ ಹಾಗೂ ಎಸ್‌ಡಿಎಂ ಕೈಗಾರಿಕಾ ತರಬೇತಿ ಕೇಂದ್ರ ತರಬೇತಿ ಅಧಿಕಾರಿ ಲ| ದಯಾನಂದ ಭಂಡಾರಿ ಅವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.