ಯಾವುದಾದರೂ ನಿಗಮ ಮಂಡಳಿಯ ನೇತೃತ್ವ ಕೊಡಿ ಶೇಖರ್ ಕುಕ್ಕೇಡಿ ಅಭಿಮಾನಿಗಳಿಂದ ಹೆಚ್ಚಿದ ಬೇಡಿಕೆ
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಅತ್ಯುತ್ತಮ ಪ್ರಬಲ ರಾಜಕಾರಣಿ ಎಂದೇ ಗುರುತಿಸಲ್ಪಟ್ಟಿರುವ ಶೇಖರ್ ಕುಕ್ಕೇಡಿ ಯವರಿಗೆ ನಿಗಮ ಮಂಡಳಿ ಯ ಅಧ್ಯಕ್ಷತೆಯನ್ನು ಕೊಡುವಂತೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ , ದಕ್ಷಿಣ ಕನ್ನಡ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷರಾದ ಶೇಖರ್ ಕುಕ್ಕೇಡಿರವರು ಸಮಾಜದ ಯುವ ನಾಯಕನಾಗಿ, ಸಾಮಾಜಿಕ ಕಳಕಳಿಯ ಯುವ ತರುಣನಾಗಿ, ತಾನು ನಂಬಿರುವ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿರುತ್ತಾರೆ.
ಅವರಿಗೆ ಕಾಂಗ್ರೇಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಭಾಗದ ಯಾವುದಾದರು ಒಂದು ನಿಗಮ/ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಬೇಕೆಂದು ನಮ್ಮ ಬೇಡಿಕೆ ಆಗಿದೆ ಎಂದಿದ್ದಾರೆ.