ವೇಣೂರು: ಸೇವಾ ಶರಧಿ ವಿಶ್ವಸ್ತ ಮಂಡಳಿ ಇದರ ಭಾರತೀ ಶಿಶು ಮಂದಿರ, ವೇಣೂರು ಮಹಿಳಾ ಮಂಡಳಿ ಹಾಗೂ ವೇಣೂರು ಯುವತಿ ಮಂಡಳಿ ಇವುಗಳ ಸಂಯುಕ್ತ ವಾರ್ಷಿಕೋತ್ಸವವು ಜ. 7ರಂದು ಸಂಜೆ 4-30ರಿಂದ ವೇಣೂರು ಮಹಿಳಾ ಮಂಡಲದ ವಠಾರದಲ್ಲಿ ಜರಗಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ವೇಣೂರು ವಿದ್ಯೋದಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ಎಸ್. ಹೆಗ್ಡೆ ವಹಿಸಲಿದ್ದು, ಪ್ರಮುಖ ಭಾಷಣಕಾರರಾಗಿ ಉಜಿರೆ ಸಾಮರಸ್ಯ ವೇದಿಕೆ ವಿಭಾಗದ ಸಹ ಸಂಯೋಜಕ ಶಿವಪ್ರಸಾದ್ ಮಲೆಬೆಟ್ಟು ಭಾಗವಹಿಸಲಿದ್ದಾರೆ. ಹೊಕ್ಕಾಡಿಗೋಳಿಯ ಉದ್ಯಮಿ, ಪ್ರಗತಿಪರ ಕೃಷಿಕರಾಗಿರುವ ರೊ| ರಾಘವೇಂದ್ರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷವಾಗಿ ವೇಣೂರು ಯಕ್ಷಶಿಕ್ಷಣ ಕಲಾ ಕೇಂದ್ರದ ಮಕ್ಕಳಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಹಾಗೂ ಶಿಶು ಮಂದಿರದ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.