December 23, 2024

ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್‌ ವಿರುದ್ಧ ಕೇಸು ದಾಖಲಿಸಿದ ಆಮ್ ಆದ್ಮಿ! ಕಾರಣವೇನು ಗೊತ್ತಾ?

0

 

ಬೆಂಗಳೂರು,ಡಿಸೆಂಬರ್‌ 29: ಆರ್ ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಮಂಡ್ಯದಲ್ಲಿ ನಡೆದ ಹನುಮ ಸಂಕೀರ್ತನ ಯಾತ್ರೆಯಲ್ಲಿ ಮುಸಲ್ಮಾನ ಮಹಿಳೆಯರಿಗೆ ಅಗೌರವ ಉಂಟು ಮಾಡುವ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಮುಖಂಡ ಉಸ್ಮಾನ್ ನರಸಿಂಹಯ್ಯ ಆಗ್ರಹಿಸಿದರು.

ನಗರದ ಶೇಷಾದ್ರಿ ಪುರಂ ಪೊಲೀಸ್ ಠಾಣೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್‌ ವಿರುದ್ಧ ದೂರು ದಾಖಲಿಸಿದ ಬಳಿಕ ಮಾತನಾಡಿದ ಉಸ್ಮಾನ್ ನರಸಿಂಹಯ್ಯ, ಸೀತೆಯನ್ನು ಲಂಕೆಯಿಂದ ಕರೆತರುವಲ್ಲಿ ಸಹಾಯ ಮಾಡಿದ ಹನುಮನ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್, ಮುಸ್ಲಿಮ್ ಮಹಿಳೆಯರಿಗೆ ಮೋದಿ ಬಂದ ಮೇಲೆ ಪರ್ಮನೆಂಟ್ ಗಂಡ ಸಿಕ್ಕಿದ್ದು ಎಂಬ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಹೇಳಿದರು.

ಪ್ರಭಾಕರ್ ಭಟ್ ಈ ರೀತಿ ಮಾತನಾಡಿದ್ದರೂ, ಬಿಜೆಪಿ ಮುಖಂಡರು ಯಾಕೆ ಸುಮ್ಮನಿದ್ದಾರೆ, ಬಿಜೆಪಿ ಅಲ್ಪ ಸಂಖ್ಯಾತ ಘಟಕ ಸತ್ತು ಹೋಗಿದೆ, ಅವರೆಲ್ಲಾ ದುಡ್ಡಿಗಾಗಿ ಕೆಲಸ ಮಾಡುತ್ತಿರುವ ಕೂಲಿಯಾಳುಗಳು ಎಂದು ಆಕ್ರೋಷ ವ್ಯಕ್ತಪಡಿಸಿದರು.

ಪ್ರಭಾಕರ್ ಭಟ್ ಮಹಿಳಾ ನಿಂದನೆ, ಜಾತಿ ನಿಂದನೆ, ಧರ್ಮ ನಿಂದನೆ ಮಾಡಿದ್ದು ಈ ರೀತಿ ಹೇಳಿಕೆ ನೀಡುವವರು, ದೇಶ ದ್ರೋಹಿ, ಧರ್ಮ ದ್ರೋಹಿಯಾಗಿರುತ್ತಾರೆ. ಅವರನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಉಸ್ಮಾನ್ ನರಸಿಂಹಯ್ಯ ಆಗ್ರಹಿಸಿದ್ದಾರೆ.

– oneindia

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು