ವೇಣೂರು: ಇಲ್ಲಿಯ ಮಹಾವೀರ ನಗರದ ಅರಹಂತ ಕಾಂಪ್ಲೆಕ್ಸ್‌ನಲ್ಲಿರುವ ಸೇವಾಸಿಂಧು ಕೇಂದ್ರವು ಕಳೆದ ಏಳು ವರ್ಷಗಳಿಂದ ಜನರಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಇದೀಗ ಯಶಸ್ವಿಯಾಗಿ 8ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಜನರಿಗೆ ಇನ್ನಷ್ಟು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕು ಕೇಂದ್ರದಲ್ಲಿ ಕರ್ನಾಟಕ ಒನ್ ಸಂಸ್ಥೆಯನ್ನು ಹೊಂದಿದ್ದು, ಅದರ ಸಹಾಯದೊಂದಿಗೆ ವೇಣೂರು ಕೇಂದ್ರದಲ್ಲಿ ಇಲ್ಲಿಯ ಜನತೆಗೆ ಹೆಚ್ಚಿನ ಸೇವೆ ನೀಡುವ ಉದ್ದೇಶದಿಂದ ಸೇವಾ ಸಿಂಧು – ಕರ್ನಾಟಕ ಇ-ಸೇವಾ ಕೇಂದ್ರ ಎಂಬ ಹೆಸರಿನೊಂದಿಗೆ ಕಾರ್ಯನಿರ್ವಹಿಸಲಿದೆ. ತ್ವರಿತಗತಿಯಲ್ಲಿ ಸರಕಾರಿ ನಾಗರಿಕ ಸೇವೆಗಳನ್ನು ಒದಗಿಸುತ್ತೇವೆ ಮತ್ತು ಸೂಕ್ತ ಮಾರ್ಗದರ್ಶನ ನೀಡುತ್ತೇವೆ. ಗ್ರಾಹಕರ ಕಾಳಜಿಯೇ ಸಂಸ್ಥೆಯ ಪ್ರಾಮುಖ್ಯತೆ ಎಂದು ಮಾಲಕರು ತಿಳಿಸಿದ್ದಾರೆ. ನಮ್ಮ ಸಂಸ್ಥೆಗೆ ವೇಣೂರಿನಲ್ಲಿ ಬೇರೆ ಯಾವುದೇ ಶಾಖೆಗಳಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಮಾಹಿತಿಗಾಗಿ: 6366334777