December 24, 2024

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಯಲ್ಲಿ ಉದ್ಯೋಗ  ವೇತನ, ಅರ್ಹತೆ ಸೇರಿದಂತೆ ನೇಮಕಾತಿ ಮಾಹಿತಿ ಇಲ್ಲಿದೆ

0
ಬೆಂಗಳೂರು, ಡಿಸೆಂಬರ್ 28: ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರು ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವವರು ಜನವರಿ 12 ರೊಳಗೆ ಅರ್ಜಿ ಸಲ್ಲಿಸಬೇಕು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಯಲ್ಲಿ ಒಟ್ಟು ಒಂದು ಡೆಪ್ಯುಟಿ ರಿಜಿಸ್ಟ್ರಾರ್ ಹುದ್ದೆ ಖಾಲಿ ಇದೆ. ಇದಕ್ಕೆ ಈ ಕೂಡಲೇ ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇದಕ್ಕು ಮೊದಲು ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ, ವೇತನ, ಅರ್ಹತೆ ಸೇರಿದಂತೆ ನೇಮಕಾತಿ ಮಾಹಿತಿ ಇಲ್ಲಿ ತಿಳಿದು ಅರ್ಜಿ ಸಲ್ಲಿಸಬೇಕು.
ಐಐಎಸ್‌ಸಿ ನೇಮಕಾತಿ ಮಾಹಿತಿ ಸಂಸ್ಥೆ ಹೆಸರು: ಭಾರತೀಯ ವಿಜ್ಞಾನ ಸಂಸ್ಥೆ (IISc)
ಹುದ್ದೆ ಹೆಸರು: ಡೆಪ್ಯುಟಿ ರಿಜಿಸ್ಟ್ರಾರ್
ಖಾಲಿ ಹುದ್ದೆ ಸಂಖ್ಯೆ: ಒಂದು
ಶೈಕ್ಷಣಿಕ ಅರ್ಹತೆ: ಸ್ನಾತಕೋತ್ತರ ಪದವಿ
ಮಾಸಿಕ ಮಾಸಿಕ: ₹15,600 ರಿಂದ 39,100 ರೂಪಾಯಿ
 ಪೋಸ್ಟಿಂಗ್: ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕೊನೆ ದಿನ: ಜನವರಿ 12.
ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಶೇಕಡಾ 50ರಷ್ಟು ಅಂಕಗಗಳ ಸಹಿತ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ವಯಸ್ಸಿನ ಮಿತಿ
ಅಭ್ಯರ್ಥಿಗಳ ವಯಸ್ಸು ಮುಂದಿನ ಜನವರಿ 12ಕ್ಕೆ ಅಂದರೆ ಅರ್ಜಿ ಸಲ್ಲಿಕೆ ಕೊನೆಯ ದಿನ ಗರಿಷ್ಠ 50 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ.
ಆಯ್ಕೆ ಹೇಗೆ ನಡೆಯಲಿದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಜೊತೆಗೆ ಗುಂಪು ಚರ್ಚೆ ನಡೆಸಿ ನಂತರ ಅಲ್ಲಿ ಆಯ್ಕೆ ಆಗುವವರನ್ನು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಐಐಎಸ್‌ಸಿ ತಿಳಿಸಿದೆ.
ಮಾಸಿಕ ವೇತನ
 ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡುವ ಜೊತೆಗೆ ಮಾಸಿಕವಾಗಿ ₹15,600 ರಿಂದ 39,100 ರೂಪಾಯಿ ನೀಡಲಾಗುವುದು.
 ಅರ್ಜಿ ಶುಲ್ಕದ ಮಾಹಿತಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ/PWD/ಮಾಜಿ ಸೈನಿಕರು/ಟ್ರಾನ್ಸ್ಜೆಂಡರ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 50ರೂಪಾಯಿ ಇದೆ. ಇನ್ನುಳಿದಂತೆ ಎಲ್ಲ ಅಭ್ಯರ್ಥಿಗಳಿಗೆ 450 ರೂಪಾಯಿ ನಿಗದಿ ಮಾಡಲಾಗಿದೆ. ಈ ಶುಲ್ಕವನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಲಾಗುವುದು.
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನೀವು ಇಲ್ಲಿ ನೀಡಲಾಗಿರುವ https://cdn.digialm.com/EForms/configuredHtml/956/86452/Registration.html ಲಿಂಕ್ ಅನ್ನು ಬಳಸಿ ಅರ್ಜಿಯನ್ನು ಸಲ್ಲಿಸಬಹುದು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು